ಮೋರೆನಾ: ಸ್ಥಳೀಯ ಬಿಜೆಪಿ ನಾಯಕ ಗುಂಡಿಕ್ಕಿದ್ದರಿಂದ ಭಾರತೀಯ ಯೋಧನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಮೋರೆನಾದಲ್ಲಿ ನಡೆದಿದೆ.
ಗಾಯಗೊಂಡಿರುವ ಯೋಧನನ್ನು ಅನ್ಶು ತೋಮರ್ ಎಂದು ಗುರುತಿಸಲಾಗಿದೆ. ಘಟನೆ ವೇಳೆ ಸ್ಥಳದಲ್ಲಿದ್ದ ಅನ್ಶು ಸ್ನೇಹಿತ ಸ್ಥಳೀಯ ಬಿಜೆಪಿ ನಾಯಕ ನಿತು ತೋಮರ್ ಅನ್ಶು ಮೇಲೆ ಗುಂಡಿನ ದಾಳಿ ನಡೆಸಿರುವುದಾಗಿ ತಿಳಿಸಿದ್ದಾರೆ.
ಹಳೇಯ ದ್ವೇಷದ ಕಾರಣ ಅನ್ಶು ತೋಮರ್ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಹೇಳಿದ್ದಾನೆ.