ಕೊಹಿಮಾ: ನಾಗಾಲ್ಯಾಂಡ್ ವಿಧಾನಸಭೆಗೆ ಇದೇ ತಿಂಗಳ 25 ರಂದು ಚುನಾವಣೆ ನಡೆಯಲಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ಮತದಾನದ ಹಿನ್ನೆಲೆಯಲ್ಲಿ 281 ಅರೆಸೇನಾ ಪಡೆ ತುಕಡಿಯನ್ನು ನಿಯೋಜಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
281 ಅರೆಸೇನಾ ಪಡೆ ತುಕಡಿಯಲ್ಲಿ 77 ತುಕುಡಿಗಳು ಈಗಾಗಲೇ ಆಗಮಿಸಿದ್ದು, ರಾಜ್ಯದಾದ್ಯಂತ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಮಾಧ್ಯಮ ಘಟಕದ ಮುಖ್ಯ ಚುನಾವಣಾಧಿಕಾರಿ ಅಭಿಜಿತ್ ಸಿನ್ಹಾ ಹೇಳಿದ್ದಾರೆ.
ಚೆಕ್ ಪೋಸ್ಟ್ ಗಳಲ್ಲಿ ಹಣ, ಮಧ್ಯ , ಮತ್ತಿತರ ಅಕ್ರಮ ಸಾಗಾಟ ತಡೆಗಟ್ಟುವ ನಿಟ್ಟಿನಲ್ಲಿ ಅರೆಸೇನಾಪಡೆಯನ್ನು ನಿಯೋಜಿಸಲಾಗಿದೆ. ಉಳಿದ 204 ತುಕಡಿಗಳು ತ್ರಿಪುರಾ ಆಸೆಂಬ್ಲಿ ಚುನಾವಣೆ ಮುಗಿದ ಬಳಿಕ ನಾಗಲ್ಯಾಂಡ್ ಗೆ ಆಗಮಿಸಲಿವೆ ಎಂದು ಅವರು ತಿಳಿಸಿದ್ದಾರೆ.
ಇದೇ ತಿಂಗಳ 18 ರಂದು ತ್ರಿಪುರಾ ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಆ ಚುನಾವಣೆ ಮುಗಿದ ಬಳಿಕ ನಾಗಲ್ಯಾಂಡ್ ವಿಧಾನಸಭಾ ಚುನಾವಣೆಗೂ ಅರೆಸೇನಾ ಪಡೆಯನ್ನು ಭದ್ರತೆಗಾಗಿ ನಿಯೋಜಿಸಲಾಗುವುದು ಎಂದು ಮಾಧ್ಯಮ ಘಟಕ ತಿಳಿಸಿದೆ.