ಮಾ.1 ರಿಂದ ರೈಲು ಬೋಗಿಗಳ ಮೇಲೆ ರಿಸರ್ವೇಷನ್ ಪಟ್ಟಿ ಇರುವುದಿಲ್ಲ!
ಮಾ.1 ರಿಂದ ಆರು ತಿಂಗಳ ವರೆಗೆ ರೈಲು ಬೋಗಿಗಳ ಮೇಲೆ ಕಾಯ್ದಿರಿಸಲಾಗಿರುವ ಟಿಕೆಟ್ ನ ಪಟ್ಟಿಯನ್ನು ಹಾಕದಂತೆ ರೈಲ್ವೆ ಇಲಾಖೆ ಎಲ್ಲಾ ವಲಯ ರೈಲ್ವೆ ನಿಲ್ದಾಣಗಳಿಗೆ ಸೂಚನೆ ರವಾನಿಸಿದೆ.
ನವದೆಹಲಿ: ಮಾ.1 ರಿಂದ ಆರು ತಿಂಗಳ ವರೆಗೆ ರೈಲು ಬೋಗಿಗಳ ಮೇಲೆ ಕಾಯ್ದಿರಿಸಲಾಗಿರುವ ಟಿಕೆಟ್ ನ ಪಟ್ಟಿಯನ್ನು ಹಾಕದಂತೆ ರೈಲ್ವೆ ಇಲಾಖೆ ಎಲ್ಲಾ ವಲಯ ರೈಲ್ವೆ ನಿಲ್ದಾಣಗಳಿಗೆ ಸೂಚನೆ ರವಾನಿಸಿದೆ.
ಪ್ರಾಯೋಗಿಕವಾಗಿ ಈ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, A1, A ಹಾಗೂ B ಕೆಟಗರಿ ರೈಲ್ವೆ ನಿಲ್ದಾಣಗಳಲ್ಲಿ ಈ ಬೋಗಿಗಳ ಮೇಲೆ ರೈಲ್ವು ಟಿಕೆಟ್ ಕಾಯ್ದಿರಿಸಲಾಗಿರುವ ಪಟ್ಟಿಯನ್ನು ಹಾಕಲಾಗುವುದಿಲ್ಲ. ಆದರೆ ರೈಲ್ವೆ ನಿಲ್ದಾಣಗಳ ಚಾರ್ಟ್ ನಲ್ಲಿ ಹಾಕಲಾಗುತ್ತದೆ.
ನವದೆಹಲಿ, ಹಜರತ್ ನಿಜಾಮುದ್ದೀನ್, ಮುಂಬೈ ಸೆಂಟ್ರಲ್, ಚೆನ್ನೈ ಸೆಂಟ್ರಲ್, ಹೌರಾ ನಿಲ್ದಾಣಗಳಲ್ಲಿ ಈ ಕ್ರಮ ಕೈಗೊಂಡ ಬೆನ್ನಲ್ಲೇ A1, A ಹಾಗೂ B ಕೆಟಗರಿ ರೈಲ್ವೆ ನಿಲ್ದಾಣಗಳಲ್ಲಿಯೂ ಈ ಪದ್ಧತಿಯನ್ನು ಅಳವಡಿಸಲಾಗುತ್ತಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.