ಕಾಂಗ್ರೆಸ್‌ಗೆ ಮತ ಹಾಕಿದರೆ ಕೇಂದ್ರದ ಯಾವುದೇ ಯೋಜನೆಯ ಸೌಲಭ್ಯ ಸಿಗುವುದಿಲ್ಲ: ಮಧ್ಯಪ್ರದೇಶ ಸಚಿವೆ
ಕಾಂಗ್ರೆಸ್‌ಗೆ ಮತ ನೀಡುವುದರಿಂದ ಕೇಂದ್ರದ ಸರ್ಕಾರದ ಯಾವುದೇ ಯೋಜನೆಗಳ ಲಾಭ ಸಿಗುವುದಿಲ್ಲ ಎಂದು ಮತದಾರರಿಗೆ ಮಧ್ಯಪ್ರದೇಶದ ಸಚಿವೆ ಮಾಯಾ ಸಿಂಗ್ ಹೇಳಿದ್ದಾರೆ...
ಮಧ್ಯಪ್ರದೇಶ: ಕಾಂಗ್ರೆಸ್‌ಗೆ ಮತ ನೀಡುವುದರಿಂದ ಕೇಂದ್ರದ ಸರ್ಕಾರದ ಯಾವುದೇ ಯೋಜನೆಗಳ ಲಾಭ ಸಿಗುವುದಿಲ್ಲ ಎಂದು ಮತದಾರರಿಗೆ ಮಧ್ಯಪ್ರದೇಶದ ಸಚಿವೆ ಮಾಯಾ ಸಿಂಗ್ ಹೇಳಿದ್ದಾರೆ.
ಮಧ್ಯಪ್ರದೇಶದ ಅಶೋಕನಗರ ವಿಧಾನಸಭೆ ಚುನಾವಣೆಗೆ ಉಪಚುನಾವಣೆ ನಡೆಯಲಿದ್ದು ಪಕ್ಷದ ಪರ ಪ್ರಚಾರ ನಡೆಸುತ್ತಿದ್ದ ಮಾಯಾ ಸಿಂಗ್ ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವುದರಿಂದ ನಿಮಗೆ ಕೇಂದ್ರ ಸರ್ಕಾರ ಯೋಜನೆಗಳ ಲಾಭ ಸಿಗುವುದಿಲ್ಲ. ಹೀಗಾಗಿ ಬಿಜೆಪಿಗೆ ಮತ ನೀಡಿ ಎಂದು ಮತದಾರರಿಗೆ ಹೇಳಿದ್ದಾರೆ.
ಬಿಜೆಪಿಗೆ ಮತ ನೀಡುವುದರಿಂದ ನಿಮಗೆ ಎಲ್ಲವು ಸಿಗುತ್ತದೆ. ಒಂದು ವೇಳೆ ಕಾಂಗ್ರೆಸ್ ಗೆ ಮತ ನೀಡುವ ಮೂಲಕ ಪ್ರಮಾದವೇನಾದರೂ ಎಸಗಿದರೆ ನಿಮಗೆ ದೊಡ್ಡ ನಷ್ಟ ಎದುರಾಗಲಿದೆ. ನಿಮ್ಮ ಅಮೂಲ್ಯವಾದ ಮತವನ್ನು ಬಿಜೆಪಿಗೆ ನೀಡಿ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಬಿಜೆಪಿ ನಾಯಕಿ ಯಶೋದರ ರಾಜೆ ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕಾದರೆ ಬಿಜೆಪಿಗೆ ಮತ ನೀಡುವಂತೆ ಹೇಳಿದ್ದರು. ಶಿವಪುರಿ ರ್ಯಾಲಿಯಲ್ಲಿ ಮಾತನಾಡಿದ್ದ ರಾಜೆ ಅವರು ಪ್ರಧಾನಮಂತ್ರಿ ಉಜ್ವಲ್ ಯೋಜನೆಯು ಬಿಜೆಪಿ ಪಕ್ಷದ ಯೋಜನೆಯಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವವರಿಗೆ ಈ ಯೋಜನೆ ಸಿಗುವುದಿಲ್ಲ ಎಂದು ಹೇಳಿದ್ದರು.
ಕಳೆದ ಚುನಾವಣೆಯಲ್ಲಿ ಬಿಜೆಪಿ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ 230 ಸ್ಥಾನಗಳ ಪೈಕಿ 165 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.