ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮನೆಯಲ್ಲಿ ಒಂಟಿಯಾಗಿದ್ದ 4 ವರ್ಷದ ಬಾಲಕಿ ಮಹಡಿಯಿಂದ ಬಿದ್ದು ಸಾವು

ಮನೆಯಲ್ಲಿ ಒಬ್ಬಂಟಿಯಾಗಿದ್ದ 4 ವರ್ಷದ ಬಾಲಕಿಯೊಬ್ಬಳು 10ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆಯೊಂದು ಘಾಜಿಯಾಬಾದ್'ನ ಇಂದಿರಾಪುರಂ ನಲ್ಲಿ ಸೋಮವಾರ ನಡೆದಿದೆ...

ಸಂಗ್ರಹ ಚಿತ್ರ
Manjula VN
Updated On : 20 Feb 2018, 2:22 am
ಘಾಜಿಯಾಬಾದ್; ಮನೆಯಲ್ಲಿ ಒಬ್ಬಂಟಿಯಾಗಿದ್ದ 4 ವರ್ಷದ ಬಾಲಕಿಯೊಬ್ಬಳು 10ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆಯೊಂದು ಘಾಜಿಯಾಬಾದ್'ನ ಇಂದಿರಾಪುರಂ ನಲ್ಲಿ ಸೋಮವಾರ ನಡೆದಿದೆ. 
ಜೈಪುರಿಯಾ ಸನ್'ರೈಸ್ ಗ್ರೀನ್ಸ್ ಆಪಾರ್ಟ್'ಮೆಂಟ್'ನ 10ನೇ ಮಹಡಿಯಲ್ಲಿದ್ದ ಫ್ಲಾಟ್ ನಲ್ಲಿ 4 ವರ್ಷದ ಬಾಲಕಿಯನ್ನು ಬಿಟ್ಟು ಪೋಷಕರು ಹೊರಗೆ ಹೋಗಿದ್ದಾರೆ. 
ಬಾಲಕಿಯ ತಂದೆ ಅಂಗಡಿಯನ್ನು ಹಾಗೂ ತಾಯಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದು, ಬಾಲಕಿಯ ಹಿರಿಯ ಸಹೋದರಿ ಟ್ಯೂಶನ್'ಗೆಂದು ಹೊರ ಹೋಗಿದ್ದಾಳೆ,  

Advertisement

Advertisement

ಮನೆಯಲ್ಲಿ ಒಬ್ಬಳೇ ಇದ್ದ ಬಾಲಕಿಯು ಚೇರ್ ವೊಂದನ್ನು ತೆಗೆದುಕೊಂದು ಬಾಲ್ಕನಿಗೆ ಹೋಗಿದ್ದಾಳೆ. ಈ ವೇಳೆ ಚೇರ್ ಮೇಲೆ ಹತ್ತಿ ಮಹಡಿಯಿಂದ ಕೆಳೆಗೆ ಬಿದ್ದಿದ್ದಾಳೆಂದು ವರದಿಗಳು ತಿಳಿಸಿವೆ. 
ಬಾಲಕಿ ಕೆಳಗೆ ಬೀಳುತ್ತಿದ್ದಂತೆಯೇ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಕಂಡು ಹೋಗಿದ್ದಾರೆ, ಈ ವೇಳೆ ಬಾಲಕಿ ಮೃತಪಟ್ಟಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement