ದೇಶ

ಉತ್ತರಪ್ರದೇಶ: ಎಲ್ಇಟಿ ಸೇರ್ಪಡೆಗೊಳ್ಳುವಂತೆ ವಾಟ್ಸ್ ಅಪ್ ಬಳಕೆದಾರನಿಗೆ ಆಹ್ವಾನ, ದೂರು ದಾಖಲು

Manjula VN
ಲಖನೌ: ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರ್ಪಡೆಗೊಳ್ಳುವಂತೆ ಉತ್ತರಪ್ರದೇಶದ ವಾಟ್ಸ್ ಅಪ್ ಬಳಕೆದಾರನೊಬ್ಬನಿಗೆ ಆಹ್ವಾನ ಬಂದಿದ್ದು, ಈ ಸಂಬಂಧ ಲಖನೌ ಸೈಬರ್ ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ಸೋಮವಾರ ತಿಳಿದುಬಂದಿದೆ. 
ವಾಟ್ಸ್ ಅಪ್ ಗ್ರೂಪಿನ ಹೆಸರು ಲಷ್ಕರ್-ಇ-ತೊಯ್ಬಾ ಎಂದು ಇದ್ದು, ಈ ಗ್ರೂಪ್'ನ್ನು ರಾಜಸ್ತಾನದ ಭಿಲ್ವಾಡಾದಲ್ಲಿರುವ 9ನೇ ತರಗತಿ ವಿದ್ಯಾರ್ಥಿಯೊಬ್ಬ ಆರಂಭಿಸಿದ್ದಾರೆಂದು ಹೇಳಲಾಗುತ್ತಿದೆ. 
ತಮ್ಮ ಮೊಬೈಲ್ ಸಂಖ್ಯೆಗೆ ಈ ರೀತಿಯ ಮೇಸೇಜ್ ರಿಕ್ವೆಸ್ಟ್ ಬರುತ್ತಿದ್ದಂತೆಯೇ ಗಾಬರಿಗೊಂಡಿರುವ ಯುವಕ ಕೂಡಲೇ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿದ್ದಾರೆ. ಈ ವೇಳೆ ಎಚ್ಚೆತ್ತ ಉಗ್ರ ನಿಗ್ರಹ ಪಡೆ ತನಿಖೆ ಆರಂಭಿಸಿದೆ ಎಂದು ವರದಿಗಳು ತಿಳಿಸಿವೆ. 
ಎಲ್ಇಟಿಗೆ ಸೇರ್ಪಡೆಗೊಳ್ಳುವಂತೆ ಸಂದೇಶವನ್ನು ಪಡೆದ ವ್ಯಕ್ತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣವನ್ನು ಸೈಬರ್ ಅಪರಾಧ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆಂದು ಉತ್ತರಪ್ರದೇಶ ಪೊಲೀಸರು ಹೇಳಿದ್ದಾರೆ. 
SCROLL FOR NEXT