ರಾಮಜನ್ಮಭೂಮಿ ಮಾಲಿಕತ್ವದ ಅಧಿಕೃತ ದಾಖಲೆ ನನ್ನ ಬಳಿ ಇದೆ: ಧರಮ್ ದಾಸ್ ಮಹಾರಾಜ್
ಮಥುರಾ(ಉತ್ತರ ಪ್ರದೇಶ): ರಾಮಜನ್ಮಭೂಮಿ ಭೂ ಮಾಲಿಕತ್ವದ ಕುರಿತಂತೆ ನಮ್ಮ ಬಳಿ ಸೂಕ್ತ ದಾಖಲೆಗಳು ಇದೆ. ಇದರಿಂದಾಗಿ ಸರ್ವೋಚ್ಚ ನ್ಯಾಯಾಲಯವು ನಮ್ಮ ಪರವಾಗಿ ತೀರ್ಪು ಪ್ರಕಟಿಸುವ ನಿರೀಕ್ಷೆ ಇದೆ ಎಂದು ರಾಮಜನ್ಮಭೂಮಿ ವಿಚಾರದಲ್ಲಿ ಮುಖ್ಯ ಫಿರ್ಯಾದಿ ಧರಮ್ ದಾಸ್ ಮಹಾರಾಜ್ ಹೇಳಿದ್ದಾರೆ.
ರಾಮಜನ್ಮಭೂಮಿ ಭೂಮಾಲಿಕತ್ವದ ಸಂಬಂಧ ನಮ್ಮ ಬಳಿ ಸಕ್ರಮ ದಾಖಲೆ ಪತ್ರಗಳಿವೆ. ಭೂ ವಿವಾದವನ್ನು ಯಾರ ಭಾವನೆಗಳಿಗೆ ಘಾಸಿಯಾಗದಂತೆ ಬಗೆಹರಿಸುವುದಾಗಿ ಸರ್ವೋಚ್ಚ ನ್ಯಾಯಾಲಯ ಹೇಳಿರುವ ಕಾರಣ ತೀರ್ಪು ನಮ್ಮ ಪರವಾಗಿಯೇ ಬರಲಿದೆ ಎಂದು ಅಖಿಲ ಭಾರತೀಯ ಪಂಚ ರಮಾನಂದಿ ನಿರ್ಮಾಣಿ ಅನಿ ಅಖಾಡದ ಮುಖ್ಯಸ್ಥರಾದ ಧರಮ್ ದಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಥುರಾದಲ್ಲಿ ನಡೆಯುತ್ತಿರುವ ಶಂಕರಾಚಾರ್ಯ ಆಶ್ರಮದ ಯತಿಗಳ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಅಯೋಧ್ಯಾ ವಿಚಾರ ಸಂಬಂಧ ನಿಯೋಗವೊಂದು ಶೀಘ್ರದಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಶಂಕರಾಚಾರ್ಯ ಅಧೋಕ್ಷಜಾನಂತ ತೀರ್ಥರು ಮಾತನಾಡುತ್ತಾ ರಾಮಮಂದಿರ ನಿರ್ಮಾಣಕ್ಕಾಗಿ ಸಂಘಟಿತ ಪ್ರಯತ್ನ ನಡೆಸಲು ಯತಿಗಳ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ. ಎಂದರು.