ಅಹಂಕಾರ, ದುರಾಡಳಿತದಿಂದ ಮಧ್ಯಪ್ರದೇಶ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲು: ರಾಹುಲ್ ಗಾಂಧಿ
ಅಹಂಕಾರ ಹಾಗೂ ಕೆಟ್ಟ ಆಡಳಿತದಿಂದ ಬಿಜೆಪಿ ಮಧ್ಯಪ್ರದೇಶ ಉಪ ಚುನಾವಣೆಯಲ್ಲಿ ಸೋಲು ಕಂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ಹೇಳಿದ್ದಾರೆ...
ನವದೆಹಲಿ: ಅಹಂಕಾರ ಹಾಗೂ ಕೆಟ್ಟ ಆಡಳಿತದಿಂದ ಬಿಜೆಪಿ ಮಧ್ಯಪ್ರದೇಶ ಉಪ ಚುನಾವಣೆಯಲ್ಲಿ ಸೋಲು ಕಂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ಹೇಳಿದ್ದಾರೆ.
ಮಧ್ಯಪ್ರದೇಶ ಉಪ ಚುನಾವಣೆ ಫಲಿತಾಂಶ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಉಪ ಚುನಾವಣೆಯ ಫಲಿತಾಂಶ ಅಹಂಕಾರ ಹಾಗೂ ಕೆಟ್ಟ ಆಡಳಿತದ ಸೋಲಾಗಿದ್ದು, ವಿಶ್ವಾಸದ ಗೆಲುವಾಗಿದೆ. ಮೊದಲು ರಾಜಸ್ತಾನ ಮತ್ತು ಇದೀಗ ಮಧ್ಯಪ್ರದೇಶ ಬದಲಾವಣೆಯ ನಿರೀಕ್ಷೆಯ ಬಾಗಿಲನ್ನು ಬಡಿಯುತ್ತಿದೆ ಎಂಬುದನ್ನು ಸಾಬೀತು ಮಾಡಿದೆ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ 2 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ನಿನ್ನೆಯಷ್ಟೇ ಪ್ರಕಟಗೊಂಡಿತ್ತು. ಎರಡೂ ಸ್ಥಾನಗಳಲ್ಲೂ ಕಾಂಗ್ರೆಸ್ ಗೆಲವು ಸಾಧಿಸಿದೆ. ಕಾಂಗ್ರೆಸ್ ನ ಹಾಲಿ ಶಾಸಕರ ನಿಧದಿಂದಾಗಿ ತೆರವಾಗಿದ್ದ ಸ್ಥಾನಗಳನ್ನು ಕಾಂಗ್ರೆಸ್ ಉಳಿಸಿಕೊಂಡಿದೆ. ಕೋಲಾರಸ್ ಮತ್ತು ಮುಂಗಾವೊಲಿಯಲ್ಲಿ ಕ್ರಮವಾಗಿ ಮಹೇಂದ್ರ ಸಿಂಗ್ ಮತ್ತು ಬ್ರಿಜೇಂದ್ರ ಸಿಂಗ್ ಯಾದವ್ ಅವರು ಗೆಲವು ಸಾಧಿಸಿದ್ದಾರೆ.