ನವದೆಹಲಿ: ಖ್ಯಾತ ಉರ್ದು ಕವಿ ಅನ್ವರ್ ಜಲಾಲ್ಪುರಿ (71) ಮೆದುಳಿನ ಆಘಾತದಿಂದ ಮೃತರಾಗಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಅನಾರೋಗ್ಯಕ್ಕೀಡಾದ ಅನ್ವರ್ ಅವರನ್ನು ಲಖ್ನೋ ದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಭಗವದ್ಗೀತೆಯನ್ನು ಉರ್ದು ಭಾಷೆಗೆ ಅನುವಾದಿಸಿದ್ದ ಅನ್ವರ್ ಇದಕ್ಕಾಗಿ ಸಾಕಷ್ಟು ಜನಮನ್ನಣೆ ಗಳಿಸಿದ್ದರು.
ಇಷ್ಟೇ ಅಲ್ಲದೆ ಅನ್ವರ್ ಅವರಿಗೆ ಸಿನಿಮಾರಂಗದ ಸಂಪರ್ಕವೂ ಇದ್ದು ಬಾಲಿವುಡ್ ನ 'ದೊ ಇಷ್ಕಿಯಾ' ಚಿತ್ರಕ್ಕಾಗಿ ನಾಸಿರುದ್ದೀನ್ ಶಾ, ಅರ್ಷಾದ್ ವರ್ಸಿ, ಮಾಧುರಿ ದೀಕ್ಷಿತ್ ವರೊಡನೆ ಕೆಲಸ ಮಾಡಿದ್ದರು. ಆದರೆ 2017ರ ನವೆಂಬರ್ ನಲ್ಲಿ ಅವರ ಮಗಳು ಮೃತರಾದ ನಂತರ ಅನ್ವರ್ ಸಾಕಷ್ಟು ಚಿಂತೆಗೀಡಾಗಿದ್ದು ದುಃಖದಿಂದ ಕುಗ್ಗಿ ಹೋಗಿದ್ದರು.
ಮೃತರ ಅಂತ್ಯಕ್ರಿಯೆಗಳು ಅವರ ಹುಟ್ಟೂರಾದ ಜಲಾಲ್ಪುರದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ.