ಟ್ರಂಪ್ ಕೆಂಡಾಮಂಡಲ: ಪಾಕಿಸ್ತಾನಕ್ಕೆ ಚೀನಾ ಬೆಂಬಲ!
ಭಯೋತ್ಪಾದನೆ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುತ್ತಿಲ್ಲ ಎಂದು ಅಮೆರಿಕ ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದರೆ ಇತ್ತ ಚೀನಾ ತನ್ನ ಪರಮಾಪ್ತ ರಾಷ್ಟ್ರದ ಬೆನ್ನಿಗೆ ನಿಂತಿದೆ.
ಬೀಜಿಂಗ್: ಭಯೋತ್ಪಾದನೆ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುತ್ತಿಲ್ಲ ಎಂದು ಅಮೆರಿಕ ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದರೆ ಇತ್ತ ಚೀನಾ ತನ್ನ ಪರಮಾಪ್ತ ರಾಷ್ಟ್ರದ ಬೆನ್ನಿಗೆ ನಿಂತಿದೆ.
ಉಗ್ರವಾದದ ವಿರುದ್ಧ ಪಾಕಿಸ್ತಾನ ಪರಿಣಾಮಕಾರಿ ಹೋರಾಟ ನಡೆಸುತ್ತಿರುವುದನ್ನು ವಿಶ್ವಸಮುದಾಯ ಗುರುತಿಸಬೇಕು ಎಂದು ಚೀನಾ ಹೇಳಿದೆ. ಜ.1 ರಂದು ಪಾಕ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 15 ವರ್ಷಗಳಿಂದ ಪಾಕಿಸ್ತಾನಕ್ಕೆ ನೆರವು ನೀಡುತ್ತಾ ಅಮೆರಿಕ ಮೂರ್ಖನಾಗಿತ್ತು. ನಾವು ಅಫ್ಘಾನಿಸ್ತಾನದಲ್ಲಿ ಟಾರ್ಗೆಟ್ ಮಾಡುತ್ತಿರುವ ಉಗ್ರರಿಗೆ ಪಾಕಿಸ್ತಾನ ಆಶ್ರಯ ನೀಡುತ್ತಿದೆ ಎಂದು ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಚೀನಾ ಪಾಕ್ ಬೆನ್ನಿಗೆ ನಿಂತಿದ್ದು, ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದೆ.