ಲಖನೌ: ಭಾರತ ಹಿಂದೂಗಳ ರಾಷ್ಟ್ರ ಎಂದಿರುವ ಉತ್ತರ ಪ್ರದೇಶದ ಬಿಜೆಪಿ ನಾಯಕ ನಮಗೆ ಸಮಸ್ಯೆಯಾಗುತ್ತಿರುವುದು ಮುಸ್ಲಿಮರಿಂದ ಎಂದು ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.
ಹಿಂದೂ ಧರ್ಮವನ್ನು ಪಾಲನೆ ಮಾಡುತ್ತಿರುವ ಏಕೈಕ ರಾಷ್ಟ್ರ ಎಂದರೆ ಅದು ಭಾರತ ಎಂದು ಬಿಜೆಪಿ ಶಾಸಕ ವಿಕ್ರಮ್ ಸೈನಿ ಹೇಳಿದ್ದು, ದೇಶದ ಹೆಸರು ಹಿಂದೂಸ್ತಾನ ಎಂದಿರುವುದರಿಂದ ಇದು ಹಿಂದೂಗಳಿಗೆ ಮಾತ್ರ ಸೇರಬೇಕೆಂದು ಹೇಳಿದ್ದಾರೆ.
ಇಂದು ಜಾತಿಯ ಹೊರತಾಗಿಯೂ ಪ್ರತಿಯೊಬ್ಬರಿಗೂ ಸರ್ಕಾರದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಈ ಹಿಂದೆ ಉದ್ದುದ್ದ ಗಡ್ಡ ಬಿಟ್ಟವರಿಗೆ ಮಾತ್ರ ಸರ್ಕಾರದ ಪ್ರಯೋಜನ ಸಿಗುತ್ತಿತ್ತು ಎಂದು ಸೈನಿ ಹೇಳಿದ್ದಾರೆ. ಇಷ್ಟಕ್ಕೇ ನಿಲ್ಲದೇ ನಾನು ಕಟ್ಟರ್ ಹಿಂದುತ್ವವಾದಿ ಎಂದು ಹೇಳಿರುವ ಸೈನಿ, ಕೆಲವು ಅಸಮರ್ಥರು ಮುಸ್ಲಿಮರು ದೇಶ ಬಿಡುವುದನ್ನು ತಡೆಗಟ್ಟಿದರು, ಅದರಿಂದಲೇ ಇಂದು ದೇಶ ಸಮಸ್ಯೆ ಎದುರಿಸುತ್ತಿದೆ ಒಂದು ವೇಳೆ ಮುಸ್ಲಿಮರು ದೇಶ ಬಿಟ್ಟಿದ್ದರೆ ಸಮಸ್ತ ಭಾರತದ ಭೂಮಿಯೂ ನಮ್ಮದಾಗುತ್ತಿತ್ತು ಎಂದು ಸೈನಿ ಅಭಿಪ್ರಾಯಪಟ್ಟಿದ್ದಾರೆ.