ಚೋಟು ಬೈರಕ್ 
ದೇಶ

ಈ ಭಿಕ್ಷುಕನ ತಿಂಗಳ ಆದಾಯ ರೂ. 30 ಸಾವಿರ, ಜೊತೆಗೆ ಮೂವರು ಪತ್ನಿಯರು!

ಭಿಕ್ಷುಕರನ್ನು ಇನ್ನು ಮುಂದೆ ಭಿಕ್ಷುಕ ಎಂದು ಕೀಳಾಗಿ ನೋಡುವಂತಿಲ್ಲ...ಕಾರಣ ಯಾವ ಐಟಿ-ಬಿಟಿ ಉದ್ಯೋಗಸ್ಥರಿಗೂ ಕಡಿಮೆ ಇಲ್ಲದಂತೆ ಭಿಕ್ಷುಕರು ಕೇವಲ ಭಿಕ್ಷಾಟನೆಯಿಂದಲೇ ಆದಾಯ ಗಳಿಸುತ್ತಿದ್ದಾರೆ.

ರಾಂಚಿ: ಭಿಕ್ಷುಕರನ್ನು ಇನ್ನು ಮುಂದೆ ಭಿಕ್ಷುಕ ಎಂದು ಕೀಳಾಗಿ ನೋಡುವಂತಿಲ್ಲ...ಕಾರಣ ಯಾವ ಐಟಿ-ಬಿಟಿ ಉದ್ಯೋಗಸ್ಥರಿಗೂ ಕಡಿಮೆ ಇಲ್ಲದಂತೆ ಬಿಕ್ಷುಕರು ಕೇವಲ ಬಿಕ್ಷಾಟನೆಯಿಂದಲೇ ಆದಾಯ ಗಳಿಸುತ್ತಿದ್ದಾರೆ.
ಇಂತಹ ಪಟ್ಟಿಗೆ ಜಾರ್ಖಂಡ್ ನ ಓರ್ವ ಭಿಕ್ಷುಕ ಸೇರಿದ್ದು, ಆತ ಕೇವಲ ಭಿಕ್ಷಾಟನೆಯಿಂದಲೇ ತಿಂಗಳಿಗೆ ಬರೊಬ್ಬರಿ 30 ಸಾವಿರ ರು. ಸಂಪಾದನೆ ಮಾಡುತ್ತಿದ್ದು, ಮೂವರು ಪತ್ನಿಯರನ್ನು ನಿರ್ವಹಿಸುತ್ತಿದ್ದಾನಂತೆ. ಮಾಧ್ಯಮವೊಂದು ವರದಿ ಮಾಡಿರುವಂತೆ ಈತನ ಹೆಸರು  ಚೋಟು ಬೈರಕ್ ಎಂದು..ಮೂಲತಃ ಜಾರ್ಖಂಡ್ ನವನಾದ ಈತ ಜಾರ್ಖಂಡ್ ನ ಚಕ್ರಧರ್ ಪುರ್ ರೈಲ್ವೇ ನಿಲ್ದಾಣದಲ್ಲಿ ಭಿಕ್ಷಾಟನೆ ಮೂಲಕ ಹಣ ಸಂಪಾದಿಸಿ ತನ್ನ ಜೀವನ ನಡೆಸುತ್ತಿದ್ದಾನೆ. ಇಷ್ಟೇ ಆಗಿದ್ದರೆ ಈತ ಇಷ್ಟು ಸುದ್ದಿಗೆ  ಗ್ರಾಸವಾಗುತ್ತಿರಲಿಲ್ಲ. ಆದರೆ ಈತನ ಮಾಸಿಕ ಆದಾಯ ಮತ್ತು ಈತನ ವೈಯುಕ್ತಿಕ ಜೀವನ ಇದೀಗ ಈತನನ್ನು ಸುದ್ದಿಗೆ ಗ್ರಾಸವಾಗುವಂತೆ ಮಾಡಿದೆ.
ಚೋಟು ಬೈರಕ್ ನ ಮಾಸಿಕ ಆದಾಯ 30 ಸಾವಿರ ರು.ಗಳಂತೆ. ಅರೆ ದೊಡ್ಡ ದೊಡ್ಡ ನಗರಗಳಲ್ಲಿ ಸೂಟು-ಬೂಟು ಹಾಕಿಕೊಂಡು ದುಡಿಯುವವರಿಗೂ ಇಷ್ಟು ವೇತನವಿಲ್ಲ..ಈತ ಕೇವಲ ಭಿಕ್ಷಾಟನೆಯಿಂದಲೇ ಇಷ್ಟು ಹಣ  ಸಂಪಾದಿಸುತ್ತಾನೆಯೇ ಎಂದು ಎಲ್ಲರೂ ಹುಬ್ಬೇರಿಸುತ್ತಿದ್ದಾರೆ. ಆದರೆ ಈತನ ಉದ್ಯೋಗ ಕೇವಲ ಭಿಕ್ಷಾಟನೆಗೇ ನಿಂತಿಲ್ಲ. ಬದಲಿಗೆ ಈತ ಭಿಕ್ಷಾಟನೆಯಲ್ಲದೇ ಬೇರೆ ಬೇರೆ ಕೆಲಸಗಳನ್ನು ಮಾಡಿಕೊಂಡಿದ್ದು, ಈತನಿಗೊಂದು ಪಾತ್ರೆ  ಅಂಗಡಿ ಕೂಡ ಇದೆ. ಅಲ್ಲದೆ ವೆಸ್ಟೀಗ್ ಎಂಬ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಾನೆ. ಕಂಪನಿಯ ಈತನಿಗೆ ಐಡಿ ಕಾರ್ಡ್ ಕೂಡ ನೀಡಿದೆ.
ಚೋಟುಗೆ ಈಗ 40 ವರ್ಷ. ಬಡ ಕುಟುಂಬದಲ್ಲಿ ಜನಿಸಿದ ಈತನಿಗೆ ಹುಟ್ಟಿನಿಂದಲೇ ಸೊಂಟದ ಭಾಗದಲ್ಲಿ ಸಾಮರ್ಥ್ಯವಿಲ್ಲ. ಆದ್ದರಿಂದ ಸಣ್ಣವನಿರುವಾಗಿನಿಂದಲೇ ಭಿಕ್ಷೆ ಬೇಡುವುದು ಅಭ್ಯಾಸವಾಗಿ ಹೋಗಿದೆಯಂತೆಯ ಆಗೆಲ್ಲ ಏನಿಲ್ಲ  ಎಂದರೂ ಮಾಸಿಕ 1000 ರಿಂದ 1500 ಸಂಪಾದಿಸುತ್ತಿದ್ದ ಚೋಟು, ಈಗ ವರ್ಷಕ್ಕೆ ಕನಿಷ್ಠ ಎಂದರೂ ಭಿಕ್ಷಾಟನೆಯಿಂದಲೇ ರು. 4 ಲಕ್ಷ ಸಂಪಾದಿಸುತ್ತಾನಂತೆ. ತನ್ನ ಭಿಕ್ಷಾಟನೆಯಿಂದ ಸಂಪಾದಿಸಿದ ಆದಾಯದಿಂದ ಚೋಟು ಇದೀಗ ಪಾತ್ರೆ ಅಂಗಡಿ ತೆರೆದಿದ್ದಾನೆ.
ಮೂವರು ಪತ್ನಿಯರ ಮುದ್ದಿನ ಗಂಡ ಈ ಚೋಟು
ಇನ್ನು ಈ ಚೋಟು ಮೂವರು ಪತ್ನಿಯರ ಮುದ್ದಿನ ಪತಿಯಾಗಿದ್ದು, ಪ್ರತಿಯೊಬ್ಬ ಪತ್ನಿಗೂ ತಿಂಗಳಿಗೆ ಇಂತಿಷ್ಟು ಎಂದು ಹಣ ನೀಡುತ್ತಾನಂತೆ. ಮೂವರು ಪತ್ನಿಯರು ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದಾರಂತೆ. ಇವನ ಒಬ್ಬ ಪತ್ನಿ  ಪಾತ್ರೆ ಅಂಗಡಿ ಜವಾಬ್ದಾರಿ ನೋಡಿಕೊಳ್ಳುತ್ತಾಳೆ. ಇನ್ನಿಬ್ಬರು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಮನೆ ನೋಡಿಕೊಳ್ಳುತ್ತಾರೆ ಎಂದು ಚೋಟು ಹೇಳಿಕೊಂಡಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ