ಕೋಲ್ಕತ್ತಾ: ಆಸ್ಕರ್ ವಿಜೇತ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಅಹಮಾನ್ ಸಿಕ್ಕಿಂ ರಾಜ್ಯದ ಪ್ರಚಾರ ರಾಯಭಾರಿಯಾಗಿ ನೇಮಕವಾಗಿದ್ದಾರೆ.
ಸಿಕ್ಕಿಂ ರಾಜಧಾನಿ ಗ್ಯಾಂಗ್ ಟಾಕ್ ನಲ್ಲಿನ ಪಾಲ್ಜೋರ್ ಮೈದಾನದಲ್ಲಿ ನಡೆದ ರೆಡ್ ಪಾಂಡಾ ವಿಂಟರ್ ಫೆಸ್ಟಿವಲ್ ಕಾರ್ಯಕ್ರಮದ ವೇಳೆ ಸಿಕ್ಕಿಂ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್, ರೆಹಮಾನ್ ಅವರನ್ನು ಪ್ರಚಾರ ರಾಯಭಾರಿ ಎಂದು ಗೊಷಿಸಿದ್ದಾರೆ.
"ಸಿಕ್ಕಿಂ ಅದರ ವಿಶ್ವಾಸಾರ್ಹತೆ, ಸೌಂದರ್ಯಕ್ಕೆ ಹೆಸರಾಗಿದೆ. ನನಗೆ ಹಲವಾರು ಯೋಜನೆಗಳಿದ್ದು ಅವುಗಳನ್ನು ಚರ್ಚಿಸಲು ನಾನು ಇಲ್ಲಿಗೆ ಬರುತ್ತೇನೆ. ಪ್ರವಾಸಿ ತಾಣವಾಗಿ ಸಿಕ್ಕಿಂನ ಪ್ರಚಾರಕ್ಕಾಗಿ ನಾವು ಸಾಕಷ್ಟು ಸಂಗೀತ ಸಂಯೋಜನೆಗಳನ್ನು ಮಾಡಬಹುದು. ನನ್ನನ್ನು ರಾಜ್ಯದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದ್ದಕ್ಕೆ ಸಿಕ್ಕಿಂನ ಜನರಿಗೆ ಧನ್ಯವಾದ ಹೇಳುತ್ತೇನೆ." ಪ್ರಚಾರ ರಾಯಭಾರಿಯಾಗಿ ನೇಮಕವಾದ ನಂತರ ರೆಹಮಾನ್ ಹೇಳಿದ್ದಾರೆ.
ಭಾರತದ ಏಕೈಕ ಸಾವಯವ ರಾಜ್ಯ ಎಂದು ಗುರುತಿಸಲ್ಪಡುವ ಸಿಕ್ಕಿಂ ಪ್ರವಾಸ, ವ್ಯಾಪಾರ ಅಂಶಗಳಲ್ಲಿ ರೆಹಮಾನ್ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ರೆಹಮಾನ್ ಪ್ರಚಾರ ರಾಯಭಾರಿಯಾಗಿ ನೇಮಕವಾಗಿರುವುದು ರಾಜ್ಯದ ಪ್ರವಾಸೋದ್ಯಮಕ್ಕೆ ಭಾರಿ ಲಾಭ ತರಲಿದೆ ಎಂದು ಅಲ್ಲಿನ ರಾಜ್ಯ ಸರ್ಕಾರ ಭರವಸೆ ಹೊಂದಿದೆ. ಬೆಟ್ಟ-ಗುಡ್ಡಗಳ ರಾಜ್ಯವಾದ ಸಿಕ್ಕಿಂ ಪ್ರವಾಶೋದ್ಯಮ ಅಭಿವೃದ್ಧಿಗಾಘಿ ಅಂತರಾಷ್ಟ್ರೀಯ ಖ್ಯಾತಿಯ ರೆಹಮಾನ್ ಅವರನ್ನು ಪ್ರಚಾರಕ್ಕಿಳಿಸುವುದು ಅತ್ಯಂತ ಲಾಭದಾಯಕವಾಗಲಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
ನೆರೆಹೊರೆಯ ಡಾರ್ಜಿಲಿಂಗ್ ನಲ್ಲಿ ಉಂಟಾಗಿದ್ದ ಗೂರ್ಖಾಲ್ಯಾಂಡ್ ನ ಹೋರಾಟದ ನಡುವೆಯೂ 2017 ರಲ್ಲಿ ಸುಮಾರು 12 ಲಕ್ಷ ಪ್ರವಾಸಿಗರು ಸಿಕ್ಕಿಂಗೆ ಭೇಟಿಕೊಟ್ಟಿದ್ದಾರೆ. 2016 ರಲ್ಲಿ 7.5 ಲಕ್ಷ ದೇಶೀಯ ಮತ್ತು 62,000 ವಿದೇಶಿ ಪ್ರವಾಸಿಗರು ರಾಜ್ಯಕ್ಕೆ ಭೇಟಿ ಇತ್ತಿದ್ದರು.