ದೇಶ

ಮಾರುತಿ ಸುಜೂಕಿ ಕಾರುಗಳ ಬೆಲೆ 17 ಸಾವಿರ ರೂಪಾಯಿ ಏರಿಕೆ

Srinivas Rao BV
ನವದೆಹಲಿ: ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜೂಕಿ, ವಾಹನಗಳ ಬೆಲೆಯನ್ನು 17,000 ರೂಪಾಯಿ ವರೆಗೂ ಏರಿಕೆ ಮಾಡಿದೆ. 
ಸರಕು ಹೆಚ್ಚಳ, ಆಡಳಿತಾತ್ಮಕ ಮತ್ತು ವಿತರಣಾ ವೆಚ್ಚಗಳು ಹೆಚ್ಚಾಗಿರುವುದರಿಂದ ವಿವಿಧ ಮಾದರಿಗಳಲ್ಲಿ 1,700 ರೂಗಳಿಂದ 17,000 ರೂಪಾಯಿಗಳ ವರೆಗೂ ಬೆಲೆ ಏರಿಕೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಕಳೆದ ಒಂದು ತಿಂಗಳ ಹಿಂದೆಯೇ ಮಾರುತಿ ಸುಜೂಕಿ ಸಂಸ್ಥೆ ಬೆಲೆ ಏರಿಕೆ ಮಾಡುವ ಬಗ್ಗೆ ತಿಳಿಸಿತ್ತು. 
ಇದೇ ವೇಳೆ ಟಾಟಾ ಮೋಟಾರ್ಸ್ ಸಹ ಜ.1 ರಿಂದ 25,000 ರೂಪಾಯಿ ಬೆಲೆ ಏರಿಕೆ ಮಾಡಿತ್ತು. ಈ ತಿಂಗಳಿನಿಂದ ಹ್ಯುಂಡೈ ಮೋಟಾರ್ ಇಂಡಿಯಾ ಸಹ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ಹೇಳಿದೆ. 
SCROLL FOR NEXT