ದೇಶ

ಇನ್ನು ಮುಂದೆ ಪಾಸ್ ಪೋರ್ಟ್ ಅಧಿಕೃತ ಅಡ್ರೆಸ್ ಪ್ರೂಫ್ ಅಲ್ಲ?

Lingaraj Badiger
ನವದೆಹಲಿ: ಕೇಂದ್ರ ಸರ್ಕಾರ ಪಾಸ್ ಪೋರ್ಟ್ ನಲ್ಲಿ ಕೆಲ ಬದಲಾವಣೆ ತರಲು ಮುಂದಾಗಿದ್ದು, ಇನ್ನು ಮುಂದೆ ಭಾರತೀಯರು ಅದನ್ನು ಅಧಿಕೃತ ಅಡ್ರೆಸ್ ಪ್ರೂಫ್ ಆಗಿ ಬಳಸಲು ಸಾಧ್ಯವಾಗುವುದಿಲ್ಲ. 
ಈ ಸಂಬಂಧ ವಿದೇಶಾಂಗ ಸಚಿವಾಲಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ನಾಗರಿಕರ ಮಾಹಿತಿ ರಕ್ಷಣೆಗಾಗಿ ಮುಂದಿನ ಸರಣಿಯ ಪಾಸ್ ಪೋರ್ಟ್ ಗಳ ಕೊನೆ ಪೇಜ್ ನಲ್ಲಿ ವಿಳಾಸ ಮುದ್ರಿಸದಂತೆ ಸೂಚಿಸಿದೆ.
ಪ್ರಸ್ತೂತ ಪಾಸ್ ಪೋರ್ಟ್ ನ ಮೊದಲ ಪುಟದಲ್ಲಿ ನಾಗರಿಕನ ಹೆಸರು, ಫೋಟೋ ಸೇರಿದಂತೆ ಇತರೆ ಮಾಹಿತಿ ಇದ್ದರೆ, ಕೊನೆ ಪುಟದಲ್ಲಿ ವಿಳಾಸ ಮುದ್ರಿಸಲಾಗುತ್ತಿದೆ.
ಈಗ ಚಾಲ್ತಿಯಲ್ಲಿರುವ ಎಲ್ಲಾ ಪಾಸ್ ಪೋರ್ಟ್ ಗಳನ್ನು ಅವಧಿ ಮುಗಿಯುವವರೆಗೆ ಬಳಸಬಹುದಾಗಿದೆ. ಹೊಸ ಪಾಸ್ ಪೋರ್ಟ್ ನಲ್ಲಿ ವಿಳಾಸ ತೆಗೆದು ಹಾಕಲಾಗುತ್ತಿದ್ದು, ಬಣ್ಣ ಸಹ ಬದಲಿಸಲಾಗುತ್ತಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
SCROLL FOR NEXT