ದೇಶ

ಇಸ್ರೇಲ್ ನ್ನು ನೀವು ನಂಬಿದಂತೆಯೇ ನಾವು ಭಾರತವನ್ನು ನಂಬುತ್ತೇವೆ: ಪ್ರಧಾನಿ ನರೇಂದ್ರ ಮೋದಿಗೆ ನೇತನ್ಯಾಹು

Srinivas Rao BV
ನವದೆಹಲಿ: ಭಾರತದಲ್ಲಿ ಉದ್ಯಮ ಸ್ಥಾಪನೆ ಮಾಡುವ ಪ್ರಕ್ರಿಯೆ ಸುಲಭವಾಗುವಂತಾಗಲು ಕ್ರಮ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೈಸಿನಾ ಡೈಲಾಗ್ ಎಂಬ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ನೇತನ್ಯಾಹು, ಬಲಹೀನರು ಉಳಿಯುವುದಿಲ್ಲ, ಬಲಾಢ್ಯರು ಮಾತ್ರ ಉಳಿಯುತ್ತಾರೆ. ಬಲಿಷ್ಠರೊಂದಿಗೆ ಮೈತ್ರಿ ಮಾಡಿಕೊಂಡರೆ ನೀವೂ ಬಲಿಷ್ಠರಾಗಿ ಶಾಂತಿ ಉಳಿಯಲು ಸಾಧ್ಯವಾಗುತ್ತದೆ, ಹೀಗಾಗಿ ನಮಗೆ ನಮ್ಮ ಮೊದಲ ಪ್ರಧಾನಿಯ ಅವಧಿಯಿಂದಲೂ ಕನಿಷ್ಠ ಬಲವನ್ನು ಸಂಪಾದಿಸಿಕೊಳ್ಳುವುದು ಅನಿವಾರ್ಯವಾಯಿತು ಎಂದು ನೇತನ್ಯಾಹು ಹೇಳಿದ್ದಾರೆ. 
ಇದೇ ವೇಳೆ ಭಾರತ-ಇಸ್ರೇಲ್ ದ್ವಿಪಕ್ಷೀಯ ಸಂಬಂಧದ ಬಗ್ಗೆಯೂ ಮಾತನಾಡಿರುವ ನೇತನ್ಯಾಹು, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಹೇಗೆ ವೃದ್ಧಿಸಬಹುದು ಎಂಬ ಬಗ್ಗೆ ಈ ಭೇಟಿಯ ವೇಳೆ ಚರ್ಚೆ ನಡೆಸಲಾಗಿದೆ, ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಗೆ ಐತಿಹಾಸಿಕ ಭೇಟಿ ನೀಡಿದ್ದರು, ಮುಂದಿನ ಭೇಟಿಗೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದುಕೊಂಡಿದ್ದೇನೆ ಇಸ್ರೇಲ್ ನ್ನು ನೀವು ನಂಬಿದಂತೆಯೇ ನಾವು ಭಾರತವನ್ನು ನಂಬುತ್ತೇವೆ ಎಂದು ಹೇಳಿದ್ದಾರೆ. 
SCROLL FOR NEXT