ಜಿಂದ್ (ಹರಿಯಾಣ): ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ನಡೆದ 15 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಕುರುಕ್ಷೇತ್ರದಲ್ಲಿ ಮೃತಪಟ್ಟಿದ್ದಾನೆ
ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ 19 ವರ್ಷದ ಯುವಕನ ಮೃತದೇಹ ಕುರುಕ್ಷೇತ್ರದಲ್ಲಿ ಸಿಕ್ಕಿರುವುದಾಗಿ ಪೋಲೀಸರು ಹೇಳಿದ್ದಾರೆ.
ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ಬಾಲಕಿಯ ಅರೆಬೆತ್ತಲೆ ದೇಹವು ಜಿಂದ್ ಜಿಲ್ಲೆ ಬುಧಖೇರಾ ಗ್ರಾಮದ ನಾಲೆಯ ಬಳಿ ಪತ್ತೆಯಾಗಿತ್ತು.
ಸಂತ್ರಸ್ತ ಬಾಲಕಿಯು ಜ.9ರಿಂದಲೂ ನಾಪತ್ತೆಯಾಗಿದ್ದಳೆಂದು ವರದಿಯಾಗಿತ್ತು.