ದೇಶ

ತಡವಾಗಿ ಬಂದಿದ್ದಕ್ಕೆ ಡಕ್ ವಾಕ್ ಶಿಕ್ಷೆ: 10ನೇ ತರಗತಿ ವಿದ್ಯಾರ್ಥಿ ಸಾವು

Vishwanath S
ಚೆನ್ನೈ: ತಡವಾಗಿ ಶಾಲೆಗೆ ಬಂದಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕರು ಕುಕ್ಕರಗಾಲಿನಲ್ಲಿ ಕುಳಿತು ಕಿವಿ ಹಿಡಿದುಕೊಳ್ಳುವ ಶಿಕ್ಷೆ ನೀಡಿದ್ದರ ಪರಿಣಾಮ ಆತ ಮೃತಪಟ್ಟಿದ್ದಾನೆ. 
ಚೆನ್ನೈನ ತಿರು ವಿ ಕ ನಗರದ ನಿವಾಸಿ 15 ವರ್ಷದ ಎಂ ನರೇಂದ್ರನ್ ಎಂಬುವರು ಶಿಕ್ಷಕರು ನೀಡದ ಶಿಕ್ಷೆಯಿಂದಲೇ ಮೃತಪಟ್ಟಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಶಾಲಾ ಆಡಳಿತ ಮಂಡಳಿ ತಿರಸ್ಕರಿಸಿದೆ. 
ಮೃತ ನರೇಂದ್ರನ್ ಶಾಲೆಗೆ ತಡವಾಗಿ ಬಂದಿದ್ದಾನೆ. ಇದರಿಂದಾಗಿ ಶಿಕ್ಷಕರು ಆತನಿಗೆ ಶಾಲಾ ಮೈದಾನದಲ್ಲಿ ಡಕ್ ವಾಕ್ ಮಾಡುವಂತೆ ಶಿಕ್ಷೆ ನೀಡಿದ್ದಾರೆ. ಡಕ್ ವಾಕ್ ಮಾಡುವಾಗ ಶಾಲಾ ಬಾಲಕ ಕುಸಿದು ಬಿದ್ದಿದ್ದು ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಖಾಸಗಿ ಆಸ್ಪತ್ರೆ ವೈದ್ಯರು ಬಾಲಕನನ್ನು ಸರ್ಕಾರಿ ಸ್ಟಾನ್ಲಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದು ಸರ್ಕಾರಿ ವೈದ್ಯರು ಮಾರ್ಗಮಧ್ಯೆ ಬಾಲಕ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. 
ಶಿಕ್ಷಕರು ಬಾಲಕನಿಗೆ ಡಕ್ ವಾಕ್ ಶಿಕ್ಷೆ ನೀಡಿರುವುದು ಶಾಲೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನರೇಂದ್ರನ್ ಸೇರಿದಂತೆ ಶಾಲಾಗೆ ತಡವಾಗಿ ಬಂದಿದ್ದ ಹಲವು ವಿದ್ಯಾರ್ಥಿಗಳಿಗೆ ಬಿಸಿಲಿನಲ್ಲಿ ಡಕ್ ವಾಕ್ ಶಿಕ್ಷೆ ನೀಡಿದ್ದಾರೆ. ಈ ವೇಳೆ ನರೇಂದ್ರನ್ ಕುಸಿದುಬಿದ್ದಿದ್ದ. ಇದರಿಂದಾಗಿಯೇ ತಮ್ಮ ಮಗ ಮೃತಪಟ್ಟಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. 
SCROLL FOR NEXT