ದೇಶ

ಗಣರಾಜ್ಯೋತ್ಸವ ನಿಮಿತ್ತ ಟ್ವಿಟರ್'ನಿಂದ 'ಇಂಡಿಯಾ ಗೇಟ್' ಎಮೋಜಿ ಬಿಡುಗಡೆ

Manjula VN
ನವದೆಹಲಿ: ಗಣರಾಜ್ಯೋತ್ಸವಕ್ಕೆ ಕೇವಲ ಎರಡು ದಿನಗಳು ಬಾಕಿಯಿದ್ದು, ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ಇಂಡಿಯಾ ಗೇಟ್ ಎಮೋಜಿಯನ್ನು ಬುಧವಾರ ಬಿಡುಗಡೆಗೊಳಿಸಿದೆ. 
ಪ್ರಸ್ತುತ ಟ್ವಿಟರ್ ಬಿಡುಗಡೆಗೊಳಿಸಿರುವ ಈ ಎಮೋಜಿ 9 ಭಾಷೆಗಳಲ್ಲಿ ಲಭ್ಯವಿದ್ದು, ಜನವರಿ 29ರವರೆಗೂ ಬಳಕೆ ಮಾಡಿಕೊಳ್ಳಬಹುದಾಗಿದೆ. 
ನೂತನ ಎಮೋಜಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಟ್ವಿಟ್ಟರ್ ಇಂಡಿಯಾದ ಮುಖ್ಯಸ್ಥೆ ಮಹಿಮಾ ಕೌಲ್ ಅವರು, ಇಂಡಿಯಾ ಗೇಡ್ ಎಮೋಜಿಯೊಂದಿಗೆ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಭಾಗಿಯಾಗಲು ಟ್ವಿಟರ್ ಬಹಳ ಸಂತಸವನ್ನು ವ್ಯಕ್ತಪಡಿಸುತ್ತದೆ. ಇಂಡಿಯಾ ಗೇಟ್ ಎಮೋಜಿ ದೇಶದ ಏಕತೆಯ ಚಿನ್ಹೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ. 
ಪ್ರತೀವರ್ಷ ಗಣರಾಜ್ಯೋತ್ಸವ ದಿನದಂದು ದೇಶದ ಪ್ರಧಾನಮಂತ್ರಿಗಳು ಇಂಡಿಯಾ ಗೇಟ್ ಬಳಿಯಿರುವ ಅಮರ ಜ್ಯೋತಿಗೆ ಭೇಟಿ ನೀಡುತ್ತಾರೆ. ಈ ವೇಳೆ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸುತ್ತಾರೆ. 
ಗಣರಾಜ್ಯೋತ್ಸವ ದಿನದಂದು ಅಮರಜ್ಯೋತಿಯಲ್ಲಿ ನಡೆಸಲಾಗುವ ಪರೇಡ್ ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸಾಮರ್ಥ್ಯ ಹಾಗೂ ದೇಶದ ಸಾಂಸ್ಕೃತಿಕ ಪರಂಪರೆ ಜೊತೆಗೆ ರಕ್ಷಣಾ ಉಪಕರಣಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಟ್ವಿಟರ್ ನ ನೂತರ ಗಣರಾಜ್ಯೋತ್ಸವದ ಎಮೋಜಿಯನ್ನು ಬಳಸಿಕೊಂಡು ರಕ್ಷಣಾ ಸಚಿವಾಲದ ಅಧಿಕಾರಿಗಳು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. 
SCROLL FOR NEXT