ಉತ್ತರಾಖಂಡ್'ನಲ್ಲಿ ಭೀಕರ ಅಪಘಾತ
ಉತ್ತರಾಖಂಡ್: ಉತ್ತರಾಖಂಡ್'ನ ಪೌರಿ ಗರ್ಹ್ವಾಲ್ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಬಸ್ ವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 47 ಮಂದಿ ಸಾವನ್ನಪ್ಪಿ, ಹಲವರಿಗೆ ಗಾಯವಾಗಿರುವ ಘಟನೆ ಭಾನುವಾರ ನಡೆದಿದೆ.
ಪೌರಿ ಗರ್ಹ್ವಾಲ್ ಜಿಲ್ಲೆಯ ನೈನಿದಂದ ಬ್ಲಾಕ್ ಬಳಿಯಿರುವ ಪಿಪಾಲಿ-ಭೂವಾನ್ ಮೊಟಾರ್'ವೇ ನಲ್ಲಿ ದುರ್ಘಟನೆ ಸಂಭವಿಸಿದೆ.
ಭೂವಾನ್ ನಿಂದ ರಾಮನಗರಕ್ಕೆ ಮಿನಿ ಬಸ್ ವೊಂದು ತೆರಳುತ್ತಿದ್ದು, ನೈನಿದಂದ ಬ್ಲಾಕ್ ಬಳಿ ಬರುತ್ತಿದ್ದಂತೆಯೇ ಬಸ್ 600 ಅಡಿ ಆಳವಿರುವ ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಬಸ್ ನಲ್ಲಿದ್ದ 44 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಮೂರು ಮಂದಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಎನ್'ಡಿಆರ್'ಎಫ್ ಪಡೆ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.
ಘಟನೆಗೆ ಈ ವರೆಗೂ ಕಾರಣಗಳು ತಿಳಿದುಬಂದಿಲ್ಲ. ಸ್ಥಳಕ್ಕಾಗಮಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics