ಖೋಟಾ ನೋಟು ಮುದ್ರಣ: ಮಲಯಾಳಂ ಕಿರುತೆರೆ ನಟ ಸೇರಿ ಮೂವರ ಬಂಧನ 
ದೇಶ

ಖೋಟಾ ನೋಟು ಮುದ್ರಣ: ಮಲಯಾಳಂ ಕಿರುತೆರೆ ನಟ ಸೇರಿ ಮೂವರ ಬಂಧನ

500 ಮತ್ತು` 200 ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿದ ಆರೋಪದಡಿಯಲ್ಲಿ ಮಲಯಾಳಂ ಕಿರುತೆರೆ ನಟ, ಆತನ ತಾಯಿ ಹಾಗೂ ಸಹೋದರಿಯನ್ನು ಬಂಧಿಸಲಾಗಿದೆ.

ಇಡಕ್ಕಿ(ಕೇರಳ): 500 ಮತ್ತು` 200 ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿದ ಆರೋಪದಡಿಯಲ್ಲಿ ಮಲಯಾಳಂ ಕಿರುತೆರೆ ನಟ, ಆತನ ತಾಯಿ ಹಾಗೂ ಸಹೋದರಿಯನ್ನು ಬಂಧಿಸಲಾಗಿದೆ.
ಆರೋಪಿಗಳು ಕೊಲ್ಲಂ ನ ಮನೈಕುಲಂಗರ ಎನ್ನುವಲ್ಲಿನ ತಮ್ಮ ಮನೆಯಲ್ಲಿ ಕಂಪ್ಯೂಟರ್ ಕಲರ್ ಪ್ರಿಂಟರ್ ಹಾಗು ಬಾಂಡ್ ಪೇಪರ್ ಬಳಸಿ ನಕಲಿ ಕರೆನ್ಸಿ ನೋಟುಗಳನ್ನು ಮುದ್ರಿಸುತ್ತಿದ್ದರು.  ಬಂಧಿತರಿಂದ 57 ಲಕ್ಷ ಮೌಲ್ಯದ ನಕಲಿ ನೋಟು, ಮುದ್ರಣ ಕಾಗದ, ಪ್ರಿಂಟರ್ ಇನ್ನಿತರೆ ಸಲಕರಣೆಗಳನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಮಲಯಾಳಂ ನ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಸೂರ್ಯ ಸಸಿಕುಮಾರ್ (36), ಸೋದರಿ ಶ್ರುತಿ (29) ಹಾಗೂ ತಾಯಿ ರಮಾದೇವಿ (56) ಎಂದು ಗುರುತಿಸಲಾಗಿದೆ. 
ಡಿವೈಎಸ್ಪಿ ಎನ್.ಸಿ.ರಾಜ್ ಮೋಹನ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.ಇದೇ ಪ್ರಕರಣಕ್ಕೆ ಸಂಬಂಧಿಸಿ ಪೋಲೀಸರಿಂದ ಭಾನುವಾರ ಬಂಧಿಸಲ್ಪಟ್ಟಿದ್ದ  ಕೃಷ್ಣಕುಮಾರ್ (46),, ಲಿಯೋ ಸ್ಯಾಮ್ (44), ಮತ್ತು ರವೀಂದ್ರನ್ (58)ಎಂಬವರು ನೀಡಿದ ಮಾಹಿತಿಯ ಆಧಾರದ ಮೇಲೆ ಈ ನಟನ ಬಂಧನವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT