ಸಂಗ್ರಹ ಚಿತ್ರ 
ದೇಶ

ಸೇನೆ ಮೇಲೆ ಕಲ್ಲು ತೂರಾಟ ನಡೆಸದೆ, ಎನ್'ಕೌಂಟರ್ ಸ್ಥಳದಿಂದ ದೂರವಿರಿ; ಸೇನಾಧಿಕಾರಿ

ಸೇನೆ ಮೇಲೆ ಕಲ್ಲು ತೂರಾಟ ನಡೆಸದೆ, ಉಗ್ರರ ವಿರುದ್ಧ ನಡೆಸುವ ಎನ್'ಕೌಂಟರ್ ಸ್ಥಳದಿಂದ ದೂರವಿರುವಂತೆ ಕಾಶ್ಮೀರ ಯುವಕ ಬಳಿ ಸೇನಾಧಿಕಾರಿ ಎ.ಕೆ.ಭಟ್ ಅವರು ಮನವಿ ಮಾಡಿಕೊಂಡಿದ್ದಾರೆ...

ಶ್ರೀನಗರ; ಸೇನೆ ಮೇಲೆ ಕಲ್ಲು ತೂರಾಟ ನಡೆಸದೆ, ಉಗ್ರರ ವಿರುದ್ಧ ನಡೆಸುವ ಎನ್'ಕೌಂಟರ್ ಸ್ಥಳದಿಂದ ದೂರವಿರುವಂತೆ ಕಾಶ್ಮೀರ ಯುವಕ ಬಳಿ ಸೇನಾಧಿಕಾರಿ ಎ.ಕೆ.ಭಟ್ ಅವರು ಮನವಿ ಮಾಡಿಕೊಂಡಿದ್ದಾರೆ. 
ಸೇನಾ ಕಾರ್ಯಾಚರಣೆ ಹಾಗೂ ಕಾಶ್ಮೀರ ಭದ್ರತೆ ಕುರಿತಂತೆ ಸೇನಾಧಿಕಾರಿ ಜನರಲ್ ಬಿಪಿನ್ ರಾವತ್ ಅವರು ಪರಿಶೀಲನೆ ನಡೆಸಿದ ಬಳಿಕ ಪ್ರಿತಿಕ್ರಿಯೆ ನೀಡಿರುವ ಹಿರಿಯ ಸೇನಾ ಕಮಾಂಡರ್ ಎ.ಕೆ.ಭಟ್ ಅವರು, ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಸ್ಥಳದಿಂದ ದೂರವಿರುವಂತೆ ಯುವಕರಿಗೆ ಮನವಿ ಮಾಡಿಕೊಂಡಿದ್ದಾರೆ. 
ಕಾಶ್ಮೀರ ಪರಿಸ್ಥಿತಿ ಕುರಿತಂತೆ ಪರಿಶೀಲನೆ ನಡೆಸಲು ಅಖ್ನೂರ್ ಸೆಕ್ಟರ್'ಗೆ ಬಂದಿದ್ದ ರಾವತ್ ಅವರೊಂದಿಗೆ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರು ಸಾಥ್ ನೀಡಿದ್ದರು. 
ಪರಿಶೀಲನೆ ವೇಳೆ 14 ಕಾರ್ಪ್ಸ್ ಜನರಲ್ ಸರಂಜೀತ್ ಸಿಂಗ್ ಸೇರಿದಂತೆ ಇನ್ನಿತರೆ ಸೇನಾಧಿಕಾರಿಗಳು ಕಾಶ್ಮೀರ ಪರಿಸ್ಥಿತಿ ಹಾಗೂ ಭದ್ರತಾ ಸಿದ್ಧತೆಗಳ ಕುರಿತಂತೆ ರಾವತ್ ಅವರಿಗೆ ವಿವರಣೆ ನೀಡಿದರು.
ಬಳಿಕ ಮಾತನಾಡಿದ ಎಕೆ. ಭಟ್ ಅವರು, ಕಾರ್ಯಾಚರಣೆ ವೇಳೆ ನಾಗರೀಕರ ಸಾವುಗಳ ಕುರಿತಂತೆ ಸೇನೆ ವಿಷಾದ ವ್ಯಕ್ತಪಡಿಸುತ್ತದೆ. 
ತಮ್ಮ ಸೇನೆಯ ಮೇಲೆ ಕಲ್ಲು ತೂರಾಟ ನಡೆಸುವುದು ಸರಿಯಲ್ಲ. ಯುವಕರು ಹಾಗೂ ಜನರು ಸೇನೆ ಮೇಲೆ ಕಲ್ಲು ತೂರಾಟ ನಡೆಸುವುದನ್ನು ನಿಲ್ಲಿಸಬೇಕು. ಉಗ್ರರ ವಿರುದ್ಧ ಎನ್'ಕೌಂಟರ್ ನಡೆಸುತ್ತಿರುವಾಗ ಸ್ಥಳದಿಂದ ಯುವಕರು ಹಾಗೂ ಜನರು ದೂರವಿರಬೇಕು. ಕಾಶ್ಮೀರದ ಜನತೆಯ ಮೇಲೆ ಸೇನೆಗೆ ಯಾವುದೇ ರೀತ್ಯ ದ್ವೇಷವಿಲ್ಲ. ಕಾಶ್ಮೀರದಲ್ಲಿರುವವರು ನಮ್ಮ ಜನತೆ. ಅವರನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ. 
ದಕ್ಷಿಣ ಕಾಶ್ಮೀರಕ್ಕೆ ಹೋಲಿಕೆ ಮಾಡಿದರೆ, ಉತ್ತರ ಕಾಶ್ಮೀರದಲ್ಲಿ ಯುವಕರು ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಳ್ಳುತ್ತಿರುವ ಸಂಖ್ಯೆ ಕಡಿಮೆಯಾಗಿದೆ. ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಳ್ಳದಂತೆ, ತಮ್ಮ ಮಕ್ಕಳು ಶಸ್ತ್ರಾಸ್ತ್ರಗಳನ್ನು ಹಿಡಿಯದಂತೆ ಪೋಷಕರು ತಡೆಯಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಗೌರವಯುತವಾಗಿ ಬಾಳಲು ನಾವು ಇಚ್ಛಿಸುತ್ತೇವೆ. ಕಾಶ್ಮೀರದಲ್ಲಿ ಶಾಂತಿ ಮರುಸ್ಥಾಪಿಸಲು ಜನತೆ ನಮಗೆ ಸಹಾಯ ಮಾಡಬೇಕು ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!