ದೆಹಲಿ ಬಳಿಕ ಜಾರ್ಖಂಡ್, ಸಾಲದ ಬಾಧೆ, ಒಂದೇ ಕುಟುಂಬ 6 ಮಂದಿ ಆತ್ಮಹತ್ಯೆ
ರಾಂಚಿ: ಆಘಾತಕಾರಿ ಘಟನೆಯಲ್ಲಿ, ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳನ್ನು ಒಳಗೊಂಡು ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾರ್ಖಂಡ್‍ನ ಹಜಾರಿಬಾಗ್‍ನ ಮನೆಯೊಂದರಲ್ಲಿ ಈ ದಾರುಣ ಘಟನೆ ನಡೆದಿದೆ.
ಆರು ಜನರ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಸುತ್ತಮುತ್ತಲಊರ ಜನರಿಗೆ ಆಘಾತ ಉಂಟುಮಾಡಿದೆ.
ಆತ್ಮಹತ್ಯೆಗೆ ಶರಣಾದವರನ್ನು ಮಹಾವೀರ್ ಮಹೇಶ್ವರಿ(70), ಅವರ ಪತ್ನಿ ಕಿರಣ್ ಮಹೇಶ್ವರಿ(65), ಮಗ ನರೇಶ್ ಅಗರ್‍ವಾಲ್(40), ಅವರ ಪತ್ನಿ ಪ್ರೀತಿ ಅಗರ್‍ವಾಲ್(38), ಮಕ್ಕಳಾದ ಅಮನ್(8) ಮತ್ತು ಅಂಜಲಿ (6) ಎಂದು ಗುರುತಿಸಲಾಗಿದ್ದು ವಿಪರೀತವಾದ ಸಾಲ ಮಾಡಿಕೊಂಡಿದ್ದ ಇವರು ಸಾಲ ತೀರಿಸಲು ವಿಫಲವಾಗಿ ಸಾಮೂಹಿಕ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದಾರೆಂದು ಅವರು ಬರೆದಿರುವ ಡೆತ್ ನೋಟಿನಿಂದ ತಿಳಿದು ಬಂದಿದೆ.
ಒಣ ಹಣ್ಣುಗಳು(ಡ್ರೈ ಫ್ರೂಟ್) ವ್ಯಾಪಾರ ನಡೆಸುತ್ತಿದ್ದ ಈ ಕುಟುಂಬ ವ್ಯಾಪಾರ ನಷ್ಟ, ಸಾಲಬಾಧೆಗೆ ಸಿಲುಕಿತ್ತು. ಇನ್ನು ನರೇಶ್ ಹಲವಾರು ದಿನಗಳಿಂದ ಖಾಯಿಲೆಗೆ ಈಡಾಗಿ ಹಾಸಿಗೆ ಹಿಡಿದಿದ್ದರು.ಅಂಗಡಿಯು ಹಲವಾರು ದಿನಗಳಿಂದ ಮುಚ್ಚಲ್ಪಟ್ಟಿತು ಮತ್ತು ಕುಟುಂಬಕ್ಕೆ ಹಣಕಾಸಿನ ಬಿಕ್ಕಟ್ಟಿನ ಕಾರಣದಿಂದಾಗಿ ಅವರು ಈ ಕೆಟ್ಟ ನಿರ್ಧಾರ ಕೈಗೊಂಡರು.
"ಖಜಾಂಚಿ ಪಾಂಡ್ ಸಮೀಪದ ಸಿಡಿಎಂ ಅಪಾರ್ಟ್ ಮೆಂಟ್ ನಲ್ಲಿ ಮೂರನೇ ಮಹಡಿಯಲ್ಲಿ ನಾಲ್ಕು ಡೆತ್ ನೋಟುಗಳು ಪತ್ತೆಯಾಗಿದೆ.ಇಬ್ಬರು ವೃದ್ದ ದಂಪತಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ ಅವರ ಮಗ ತಾರಸಿಯಿಂದ ಹಾರಿ ಜೀವ ಕಳೆದುಕೊಂಡಿದ್ದಾರೆ. ಸೊಸೆ ವಿಷ ಸೇವಿಸಿದ್ದಾರೆ."ಹಜಾರಿಭಾಗ್ ಸಾದರ್ ಡಿಎಸ್ಪಿ ಚಂದನ್ ವ್ಯಾಟ್ಸ್ ಹೇಳಿದರು
ಚಿಕ್ಕ ಮಕ್ಕಳಿಬ್ಬರಿಗೆ ಸೊಸೆ ವಿಷ ನೀಡಿದ್ದಾಳೆ, ಅವರಲ್ಲಿ ಒಬ್ಬನನ್ನು ಕುತ್ತಿಗೆಯನ್ನು ಕತ್ತರಿಸಿ ಕೊಲ್ಲಲಾಗಿದೆ ಅಮನ್ ಚಿಕ್ಕವನಾಗಿದ್ದರಿಂದ ಅವನಿಗೆ ನೇಣು ಹಾಕಲು ಸಾಧ್ಯವಾಗಲಿಲ್ಲ, ಇದಕ್ಕಾಗಿ ಅವನನ್ನು ಕುತ್ತಿಗೆ ಕತ್ತರಿಸಿ ಕೊಲ್ಲಲಾಗಿದೆ ಎಂದು ಡೆತ್ ನೋಟ್ ನಲ್ಲಿ ವಿವರಿಸಲಾಗಿದೆ ಎಂದು ಪೋಲೀಸ್ ಅಧಿಕಾರಿ ಹೇಳಿದ್ದಾರೆ.