ದೇಶ

ಕಲಾಂ 'ವಿಶನ್ 2020' ಕನಸು ಪ್ರಧಾನಿ ಮೋದಿಯವರ 'ನವ ಭಾರತ'ದಿಂದ ಸಾಕಾರ: ಜಿತೇಂದ್ರ ಸಿಂಗ್

Nagaraja AB

ನವದೆಹಲಿ: ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರ 'ವಿಶನ್ 2020' ಕನಸು ಪ್ರಧಾನಿ ನರೇಂದ್ರಮೋದಿ ಅವರ 'ನವ ಭಾರತ'ದಿಂದ ಸಾಕಾರಗೊಳ್ಳುತ್ತಿದೆ ಎಂದು  ಕೇಂದ್ರ  ಸಚಿವ ಜೀತೆಂದ್ರ ಸಿಂಗ್ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಅಪಿಜೆ ಅಬ್ದುಲ್ ಕಲಾಂ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  2020 ರೊಳಗೆ ಭಾರತ ಅಭಿವೃದ್ದಿ ಆಗಬೇಕೆಂದು ಅಬ್ದುಲ್ ಕಲಾಂ ಕನಸು ಕಂಡಿದ್ದರು. ಪ್ರಧಾನಿ ನರೇಂದ್ರಮೋದಿ ಈ ಕನಸನ್ನು ಸಾಕಾರಗೊಳಿಸುತ್ತಿದ್ದಾರೆ ಎಂದು ತಿಳಿಸಿದರು.

ಕಲಾಂ ಅವರು ವಿಜ್ಞಾನ ಕ್ಷೇತ್ರದಲ್ಲಿ ಬೆಳೆಸಿಕೊಂಡಿದ್ದ ಆಸಕ್ತಿ ಕುರಿತು ಮಾತಾಡಿದ ಸಚಿವರು, ಕಲಾಂ  ಸಾರ್ವಜನಿಕ ಹಾಗೂ ಖಾಸಗಿ ವಿಷಯಗಳಿಂದ ಅವರು ಎಂದಿಗೂ ವಿರೋಧ ಕಟ್ಟಿಕೊಂಡಿರಲಿಲ್ಲ, ಕಲಿಕೆ ಹಾಗೂ ಅವರ ಸ್ಪೊರ್ತಿಯುತ ಅನುಭಗಳು ಎಂದಿಗೂ ಪ್ರೇರಣೆಯಾಗಲಿವೆ ಎಂದು ಸ್ಮರಿಸಿದರು.

ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ   ಸಾರ್ವಜನಿಕ ಹಿತಾಸಕ್ತಿ ರಕ್ಷಣೆಗಾಗಿ ಶ್ರಮಿಸಿದ ಅಧಿಕಾರಿಗಳಿಗೆ ಅಬ್ದುಲ್ ಕಲಾಂ ಸ್ಮಾರಕ ಪ್ರಶಸ್ತಿಯನ್ನು ವಿತರಿಸಲಾಯಿತು.

SCROLL FOR NEXT