ದೇಶ

ಸೆಕ್ಷನ್ 377: ತೀರ್ಪು ಕಾಯ್ದಿರಿಸಿದ ಸುಪ್ರೀಂ, ಕೋರ್ಟ್

Raghavendra Adiga
ನವದೆಹಲಿ:ಇಂಡಿಯನ್ ಪೀನಲ್ ಕೋಡ್  377 ನೇ ವಿಭಾಗದ ಸಾಂವಿಧಾನಿಕ ಮಾನ್ಯತೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಸಲಿಂಗ ಕಾಮ ಶಿಕ್ಷಾರ್ಹ ಅಪರಾಧ ಎನ್ನುವ ಕುರಿತ ಸೆಕ್ಷನ್ 377 ರದ್ದತಿ ಕೋರಿ ಸಲ್ಲಿಸಲಾಗಿದ್ದ ಮನವಿ ಆಲಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠ ತನ್ನ ತೀರ್ಪನ್ನು ಕಾದಿರಿಸಿದೆ.
ಸಲಿಂಗಕಾಮದ ಪರ, ವಿರೋಧ ವಾದಗಳನ್ನು ಮಂಡಿಸಿರುವ ಆಯಾ ಬಣದ ವಕೀಲರಿಗೆ ತಮ್ಮ ಹೇಳಿಕೆಗಳನ್ನು ಶುಕ್ರವಾರದೊಳಗೆ ಲಿಖಿತ ರೂಪದಲ್ಲಿ ಸಲ್ಲಿಸಬೇಕೆಂದು ನ್ಯಾಯಾಲಯ ಹೇಳಿದೆ.
ಒಂದು ವೇಳೆ ಸಲಿಂಗಕಾಮವನ್ನು ಅಪರಾಧ ಪಟ್ಟಿಯಿಂದ ಹೊರತಂದರೆ ಆ ಸಮುದಾಯಕ್ಕೆ ಸಮಾಜದಲ್ಲಿ ಸಮಾನತೆ ದೊರೆಯಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಾಲಯ ತಾನು ಅಂತಿಮ ತೀರ್ಪು ನೀಡುವ ಮುನ್ನ 377  ವಿಭಾಗದ ಎಲ್ಲಾ ಅಂಶಗಳನ್ನು ಪುನರ್ ಪರಿಶೀಲನೆ ನಡೆಸುವುದಾಗಿ ಹೇಳಿದೆ.
SCROLL FOR NEXT