ನವದೆಹಲಿ: ವಿಪಕ್ಷಗಳ ನಿರೀಕ್ಷೆಗೂ ಮೀರಿ ಈ ಬಾರಿ ಸ್ವೀಕರ್ ಸುಮಿತ್ರಾ ಮಹಾಜನ್ ಅವರು ಅವಿಶ್ವಾಸ ಮಂಡನೆಗೆ ಅವಕಾಶ ನೀಡಿದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಮಾಸ್ಟರ್ ಪ್ಲಾನ್ ಇದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಕಳೆದ ಬಾರಿ ಕೇಂದ್ರ ಸರ್ಕಾರದ ವಿರುದ್ಧ ಟಿಡಿಪಿ ಅವಿಶ್ವಾಸ ಮಂಡನೆಗೆ ಮುಂದಾಗಿದ್ದರಿಂದ ಇಡೀ ಕಲಾಪವೇ ಬಲಿಯಾಗಿತ್ತು. ಇದೀಗ ಅಂತಹ ತಪ್ಪನ್ನು ಮಾಡಲು ಕೇಂದ್ರ ಸರ್ಕಾರ ಸಿದ್ಧವಾಗಿಲ್ಲ. ಅವಿಶ್ವಾಸ ಮಂಡನೆ ಸಾಬೀತಿನ ವಿರುದ್ಧ ಮೋದಿ ಸರ್ಕಾರ ಆತ್ಮವಿಶ್ವಾಸ ಧೃಡವಾಗೇ ಇದೆ. ವಿಪಕ್ಷಗಳಿಗೆ ಅವಕಾಶ ನೀಡಿ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ಹಿಂದೆ ಅವಕಾಶವಾದಿ ಉದ್ದೇಶವಿದೆ ಎಂಬುವುದನ್ನು ತೋರಿಸಲು ಬಿಜೆಪಿ ಮುಂದಾಗಿದೆ.
ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಣಿಯುವ ಹೊರತಾಗಿ ಬೇರೆ ಯಾವ ಉದ್ದೇಶವೇ ಇಲ್ಲ ಎಂಬುವುದನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಾಳಯ ನಿರ್ಧರಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
15 ವರ್ಷಗಳ ಬಳಿಕ ನಾಳೆ ಸಂಸತ್ ನಲ್ಲಿ ಮಂಡನೆಯಾಗಲಿರುವ ಅವಿಶ್ವಾಸ ಗೊತ್ತುವಳಿಯಲ್ಲಿ ಸಂಖ್ಯಾಬಲ ಸಾಬೀತುಪಡಿಸಲು ಮೋದಿ ಸರ್ಕಾರ ಆತ್ಮವಿಶ್ವಾಸದಿಂದ ಇದೆ. ಇನ್ನು ನಮ್ಮ ಬಳಿ ಸಂಖ್ಯಾಬಲವಿದೆ ಎಂದು ಖುದ್ದು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಹೇಳಿರುವುದು ತೀವ್ರ ಕುತೂಹಲ ಮೂಡಿಸಿದೆ.
ಲೋಕಸಭೆಯಲ್ಲಿ ಪಕ್ಷಗಳ ಬಲಾಬಲ- 545
ಈಗಿರುವ ಬಲ-ಸ್ಪೀಕರ್ ಸೇರಿ 535
* ಗೊಂದಲದಲ್ಲಿರುವ ಪಕ್ಷಗಳ ಬಲ-76