ನ್ಯಾ. ಕೆ ಎಂ ಜೋಸೆಫ್ 
ದೇಶ

ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನ್ಯಾ. ಕೆ ಎಂ ಜೋಸೆಫ್ ನೇಮಕಕ್ಕೆ ಕೊಲಿಜಿಯಂ ಪಟ್ಟು

ಸುಪ್ರೀಂ ಕೋರ್ಟ್ ಕೊಲಿಜಿಯಂ ಉತ್ತರಾಖಂಡ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಕೆ. ಎಂ. ಜೋಸೆಫ್ ಅವರ ಹೆಸರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಶಿಫಾರಸು ಮಾಡೌವ ತನ್ನ....

ನವದೆಹಲಿ: ಸುಪ್ರೀಂ ಕೋರ್ಟ್ ಕೊಲಿಜಿಯಂ ಉತ್ತರಾಖಂಡ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಕೆ. ಎಂ. ಜೋಸೆಫ್ ಅವರ ಹೆಸರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಶಿಫಾರಸು ಮಾಡೌವ ತನ್ನ ನಿರ್ಧಾರವನ್ನು ಮತ್ತೆ ಪುನರುಚ್ಚರಿಸಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ಸದಸ್ಯರ ಕೊಲಿಜಿಯಂ ಈ ತೀರ್ಮಾನ ಕೈಗೊಂಡಿದೆ. ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರ ಪತ್ರದಲ್ಲಿರುವಂತೆ ಜೋಸೆಫ್ ಆಯ್ಕೆಯಲ್ಲಿ ಯಾವ ಪ್ರತಿಕೂಲತೆಗಳಿಲ್ಲ ಎಂದು ಅದು ಹೇಳಿದೆ.
ಸಿಜೆಐ ಜೊತೆಗೆ, ಕೊಲಿಜಿಯಂ ನಲ್ಲಿರುವ ಇತರೆ ಸದಸ್ಯರೆಂದರೆ = ನ್ಯಾಯಮೂರ್ತಿಗಳಾದ ರಂಜನ್ ಗೊಗೊಯಿ, ಮದನ್ ಬಿ ಲೋಕೂರ್, ಕುರಿಯನ್ ಜೋಸೆಫ್ ಮತ್ತು ಎ ಕೆ ಸಿಕ್ರಿ. ಇದರಲ್ಲಿ ನ್ಯಾಯಮೂರ್ತಿಗಳಾದ ಸಿಕ್ರಿ ನೂತನವಾಗಿ ಕೊಲಿಜಿಯಂ ಸದಸ್ಯರಾಗಿದ್ದು ಜೂನ್ 22ರಂದು ನಿವೃತ್ತರಾದ ನ್ಯಾಯಮೂರ್ತಿ ಚಲಮೇಶ್ವರ್ ಅವರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
"ಕಾನೂನು ಸಚಿವರ ಪತ್ರಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಿದ್ದೇವೆ.ಏಪ್ರಿಲ್ 26, 2018, ಏಪ್ರಿಲ್ 30, 2018ರಂದು ಅವರು ಬರೆದ ಪತ್ರಗಳಲ್ಲಿ ಅವರು  ಜನವರಿ 10 ನಾವು ಶಿಫಾರಸು ಮಾಡಿದ್ದ ಕೆ.ಎಂ. ಜೋಸೆಫ್ ಹೆಸರನ್ನು ಪುನರ್ ಪರಿಶೀಲಿಸುವಂತೆ ತಿಳಿಸಿದ್ದರು. ಇದರಂತೆ ಕೊಲಿಜಿಯಂ ಈ ಎರಡು ಪತ್ರಗಳಲ್ಲಿ ಪ್ರಸ್ತಾಪಿಸಿದ ಎಲ್ಲಾ ಅಂಶಗಳ ನ್ನು ಗಮನದಲ್ಲಿರಿಸಿಕೊಂಡು ಜೋಸೆಫ್ ಅವರ ಹೆಸರನ್ನೇ ಸರ್ವೋಚ್ಚ ನ್ಯಾಯಾಲಯ ನೇಮಕಕ್ಕಾಗಿ ಶಿಫಾರಸು ಮಾಡಲು ಇನ್ನೊಮ್ಮೆ ಸಮ್ಮತಿಸಿದೆ." 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT