ಚಂಡಿಗಢ: ಮದುವೆಗೆ ಮುನ್ನ ಮದುವೆಗೆ ಗಂಡನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಚಂಡಿಘಡ ಸರ್ಕರಾದ ಸೂಚಿಸಿದೆ.
ಅರೆ..ಇದೇನಿದು ಮದುವೆಗೂ ಮುನ್ನ ಮದುವೆ ಗಂಡಿನ ಪರೀಕ್ಷೆ ಮಾಡಬೇಕು ಎಂದು 'ತಪ್ಪು' ತಿಳಿಯಬೇಡಿ. ಇದು ನೀವು ಭಾವಿಸುತ್ತಿರುವ ಪರೀಕ್ಷೆಯಲ್ಲ.. ಬದಲಿಗೆ ಮಾದಕವ್ಯಸನದ ಪರೀಕ್ಷೆ..
ಮಾದಕ ವ್ಯಸನ ಎಂಬುದು ದೇಶಾದ್ಯಂತ ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ಪ್ರಮುಖವಾಗಿ ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದನೆಯಂತೆಯೇ ಮಾದಕ ವ್ಯಸನ ಕೂಡ ಪಜಾಬ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಈ ಮಾದಕ ವ್ಯಸನವನ್ನು ಬುಡಸಹಿತ ಕಿತ್ತುಹಾಕಲು ದಿಟ್ಟ ಹೆಜ್ಜೆ ಇಟ್ಟಿರುವ ಚಂಡೀಘಡ ಸರ್ಕಾರ, ಮದುವೆ ಗಂಡು ಕೂಡ ಮಾದಕದ್ರವ್ಯ ಪರೀಕ್ಷೆಗೆ ಒಳಗಾಗುವುದನ್ನು ಕಡ್ಡಾಯಗೊಳಿಸಿದೆ.
ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಲು ಗಂಡಸರ ಮಾದಕದ್ರವ್ಯ ವ್ಯಸನವೇ ಕಾರಣ ಎಂಬುದನ್ನು ವಿವಿಧ ವಿಚ್ಚೇದನ ಪ್ರಕರಣಗಳಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಕಂಡುಕೊಂಡಿದೆ. ಈ ಹಿನ್ನೆಲೆಯಲ್ಲಿ ಮದುವೆಗೂ ಮುನ್ನ ಗಂಡಿಗೆ ಮಾದಕ ವಸ್ತು ಪರೀಕ್ಷೆ ಮಾಡಬಹುದೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಮದುವೆ ಗಂಡನ್ನು ಮಾದಕದ್ರವ್ಯ ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳುವುದಾಗಿ ಚಂಡೀಗಢ ಸರಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ಮದುವೆ ಆಗುತ್ತಿರುವ ವರ ಮಾದಕ ದ್ರವ್ಯಗಳ ದುಶ್ಚಚಟಕ್ಕೆ ದಾಸನಾಗಿಲ್ಲ ಎನ್ನುವುದನ್ನು ಖಾತರಿ ಪಡಿಸಿಕೊಳ್ಳುವುದಕ್ಕಾಗಿ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಮಾದಕ ದ್ರವ್ಯದ ತಪಾಸಣೆಗೆ ಸೌಲಭ್ಯ ಕಲ್ಪಿಸುವ ಸಂಬಂಧ ಪ್ರಮಾಣ ಪತ್ರ ಸಲ್ಲಿಸುವಂತೆ ಹರ್ಯಾಣ, ಪಂಜಾಬ್ ಹಾಗೂ ಚಂಡೀಗಢ ಆಡಳಿತಕ್ಕೆ ಕೋರ್ಟ್ ನೋಟಿಸ್ ಜಾರಿ ಮಾಡಲಾಗಿತ್ತು. ಹರ್ಯಾಣ ಹಾಗೂ ಪಂಜಾಬ್ ಸಕಾರಗಳು ಈಗಾಗಲೇ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿವೆ.