ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್
ನವದೆಹಲಿ: ದೇಶದ ಒಳಗಿರುವ ಹಾಗೂ ಹೊರಗಿರುವ ಕೆಲ ಶಕ್ತಿಗಳು ಭಾರತವನ್ನು ಒಡೆಯಲು ಯತ್ನಗಳನ್ನು ನಡೆಸುತ್ತಿದೆ ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಬುಧವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲ ದಿನಗಳ ಹಿಂದಷ್ಟೇ ಉಗ್ರರು ನಡೆಸಿದ್ದ ದಾಳಿಯಲ್ಲಿ ಸಿಆರ್'ಪಿಎಫ್ ಯೋಧ ಶಂಕರ್ ಲಾಲ್ ಬರಾಲಾ ಅವರು ಹುತಾತ್ಮರಾಗಿದ್ದರು. ಹುತಾತ್ಮ ಯೋಧನಿಗೆ ಇಂದು ಅಂತಿಮ ನಮನ ಸಲ್ಲಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ರಾಜ್ಯವರ್ಧನ್ ರಾಥೋಡ್ ಅವರು, ದೇಶವನ್ನು ಒಡೆಯಲು ಕೆಲ ಶಕ್ತಿಗಳು ಯತ್ನ ನಡೆಸುತ್ತಿವೆ ಎಂದು ಹೇಳಿದ್ದಾರೆ.
ಯೋಧರು ನಮ್ಮ ದೇಶವನ್ನು ರಕ್ಷಣೆ ಮಾಡುತ್ತಿದ್ದಾರೆ. ಸಿಆರ್'ಪಿಎಫ್ ಯೋಧರ ಧೈರ್ಯಕ್ಕೆ ಸೆಲ್ಯೂಟ್ ಹೊಡೆಯುತ್ತೇನೆ. ದೇಶವನ್ನು ಕಾಯಲು ಯೋಧರು ಸದಾಕಾಲ ಸಿದ್ಧರಿರುತ್ತಾರೆ. ದೇಶದ ಹೊರಗಿರುವ ಹಾಗೂ ಒಳಗಿರುವ ಕೆಲ ಶಕ್ತಿಗಳು ದೇಶವನ್ನು ಒಡೆಯಲು ಯತ್ನ ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ.