ನವದೆಹಲಿ: ಶತ್ರುರಾಷ್ಟ್ರಗಳ ಟ್ಯಾಂಕರ್ ಗಳನ್ನು ಕ್ಷಣಮಾತ್ರದಲ್ಲಿ ಹೊಡೆದುರುಳಿಸಬಲ್ಲ ಇಸ್ರೇಲ್ ನ ಪ್ರಬಲ 'ಸ್ಪೈಕ್ ಕ್ಷಿಪಣಿ'ಗಳನ್ನು ಖರೀದಿಸಲು ಭಾರತ ಮುಂದಾಗಿದೆ.
ಈ ಬಗ್ಗೆ ಭಾರತ ಮತ್ತು ಇಸ್ರೇಲ್ ನಡುವಿನ ಒಪ್ಪಂದ ಘೋಷಣೆಯಾಗಿದ್ದು, ಸ್ಪೈಕ್ ಕ್ಷಿಪಣಿ ಖರೀದಿ ಸಂಬಂಧ ಮಾತುಕತೆ ಅಂತಿಮಗೊಂಡಿದೆ. ಖರೀದಿ ಬಗ್ಗೆ ಶೀಘ್ರವೇ ಒಪ್ಪಂದ ಪ್ರಕಟವಾಗಲಿದೆ.
ಇನ್ನು ಇಸ್ರೇಲ್ ಸಹಯೋಗದಲ್ಲಿ ಭಾರತದ ರಕ್ಷಣಾ ತಂತ್ರಜ್ಞಾನ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಈ ಸ್ಪೈಕ್ ಕ್ಷಿಪಣಿಗಳನ್ನು ತಯಾರಿಸಿಕೊಡಲಿದೆ ಎನ್ನಲಾಗಿದೆ. ಆದರೆ ಕ್ಷಿಪಣಿ ತಯಾರಿಕೆ ಮತ್ತು ಪರೀಕ್ಷೆ ಮತ್ತು ಸೇನೆಗೆ ಸೇರ್ಪಡೆ ಮಾಡಿಕೊಳ್ಳಲು 3 ವರ್ಷ ಸಮಯ ತಗಲುತ್ತದೆ. ಈ ಹಿನ್ನೆಲೆಯಲ್ಲಿ ಅಲ್ಲಿಯವರೆಗೆ ದೇಶದ ರಕ್ಷಣಾ ವ್ಯವಸ್ಥೆಗೆ ಬಲ ತುಂಬಲು ಇಸ್ರೇಲ್‌ನಿಂದ ಈ ಟ್ಯಾಂಕ್ ನಿರೋಧಕ ಕ್ಷಿಪಣಿ ಸ್ರೈ್ಕ್ ಖರೀದಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಪೈಕ್ ಕ್ಷಿಪಣಿ ಖರಿದಿ, ಪಾಕ್ ಗೆ ಭಾರತ ಸೆಡ್ಡು
ಇನ್ನು ಇಸ್ರೇಲ್ ಕ್ಷಿಪಣಿ ಖರೀದಿಯಿಂದ ಭಾರತವು ಪಾಕಿಸ್ತಾನಕ್ಕೆ ಸೆಡ್ಡು ಹೊಡೆಯಲಿದ್ದು, ಸೇನೆಯ ತುರ್ತು ಅಗತ್ಯ ಪೂರೈಕೆಯಾಗಲಿದೆ. ಇಸ್ರೇಲ್ ನ ರಫೇಲ್ ಅಡ್ವಾನ್ಸ್‌ಡ್ ಡಿಫೆನ್ಸ್ ಸಿಸ್ಟಮ್ಸ್ ಲಿ. ಟ್ಯಾಂಕ್ ನಿರೋಧಕ ಕ್ಷಿಪಣಿಯನ್ನು ಪೂರೈಸಲಿದೆ. ಇನ್ನು ಭಾರತೀಯ ಸೇನೆಗೆ 8000 ಟ್ಯಾಂಕ್ ನಿರೋಧಕ ಕ್ಷಿಪಣಿಗಳ ಅಗತ್ಯವಿದ್ದು, ಡಿಆರ್‌ಡಿಒ 2021ರೊಳಗೆ ಅವುಗಳನ್ನು ಪೂರೈಸಲಿದೆ. ಅಲ್ಲಿಯವರೆಗೆ ಇಸ್ರೇಲ್ ಕ್ಷಿಪಣಿ ದೇಶದ ರಕ್ಷಣಾ ವ್ಯವಸ್ಥೆಗೆ ಬೆಂಬಲ ನೀಡಲಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics