ಫರೀದಾಬಾದ್; 5 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ನಡೆಸಿ, ಇರಿದು ಹತ್ಯೆ ಮಾಡಿ ಅಮಾನವೀಯ ಘಟನೆ ಹರಿಯಾಣದ ಪಲ್ವಾಲ್ ಜಿಲ್ಲೆಯ ಅಸಾವೊಟಿ ಗ್ರಾಮದಲ್ಲಿ ನಡೆದಿದೆ.
ಬಾಲಕಿ ತಂದೆಯ ಮೇಲಿನ ಹಳೇ ದ್ವೇಷಕ್ಕಾಗಿ ಗುರುವಾರ ರಾತ್ರಿ ವೀರೇಂದ್ರ ಎಂಬಾತ ಈ ಕೃತ್ಯ ಎಸಗಿದ್ದಾನೆಂದು ಹೇಳಲಾಗುತ್ತಿದೆ.
ಪ್ರಕರಣ ಸಂಬಂಧ ಪ್ರಸ್ತುತ ಆರೋಪಯನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಟೆಂಟ್ ಹೌಸ್ ನಲ್ಲಿ ವೀರೇಂದ್ರ ಕೆಲಸ ಮಾಡುತ್ತಿದ್ದ. ಅವರಿಬ್ಬರ ನಡುವೆ ವಾಗ್ವಾದ ನಡೆದಿತ್ತು. ಪ್ರತೀಕಾರ ತೀರಿಸಿಕೊಳ್ಳಲು ಆತ ಬಾಲಕಿ ಅತ್ಯಾಚಾರಗೈದ ಬಳಿಕ ಹತ್ಯೆ ಮಾಡಿ, ಮೃತದೇಹ ಕಂಟೈನಲ್ ನಲ್ಲಿ ಮುಚ್ಚಿಟ್ಟಿದ್ದ ಎಂದು ತಿಳಿದುಬಂದಿದೆ.