ವಿದ್ಯುತ್ ಬಿಲ್ ಬಾಕಿ ಕೇಳಿದ ಸರ್ಕಾರಿ ಉದ್ಯೋಗಿಗೆ ಬಿಜೆಪಿ ಮುಖಂಡನಿಂದ ಥಳಿತ, ವೈರಲ್ ವೀಡಿಯೋ
ಇಸಾಘರ್(ಮಧ್ಯ ಪ್ರದೇಶ): ರಾಜ್ಯ ವಿದ್ಯುತ್ ಇಲಾಖೆ ನೌಕರನೊಬ್ಬನಿಗೆ ಮಧ್ಯ ಪ್ರದೇಶದ ಭಾರತೀಯ ಜನತಾ ಪಕ್ಷದ ನಾಯಕ ಜಗನ್ನಾಥ್ ಸಿಂಗ್ ರಘುವಂಶಿ ಥಳಿಸಿರುವ ವೀಡುಇಯೋ ದೃಶ್ಯವೊಂದು ಮಾದ್ಯಮದಲ್ಲಿ ಹರಿದಾಡುತ್ತಿದೆ.
ದೃಶ್ಯದಲ್ಲಿ ಬಿಜೆಪಿ ನಾಯಕ ರಘುವಂಶಿ ತನ್ನ ಬೂಟುಗಾಲಿನಿಂದ ನೌಕರನ ಮೇಲೆ ಹಲ್ಲೆ ನಾಡೆಸಿದ್ದನ್ನು ಕಾಣಬಹುದಾಗಿದೆ.
"ನೀನು ನನ್ನ ಕರುಣೆಯಿಂದಾಗಿ ಉಳಿದಿದ್ದಿ, ಇಲ್ಲವಾದಲ್ಲಿ ನಿನ್ನ ಮುಖವನ್ನೇ ಕಪ್ಪಾಗಿಸುತ್ತಿದ್ದೆ" ಸರ್ಕಾರಿ ನೌಕರನಿಗೆ ಬಿಜೆಪಿ ಮುಖಂಡರು ಹೇಳಿದ್ದಾರೆ. ಈ ವೀಡಿಯೋ ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗಿದೆ.
ರಘುವಂಶಿ 4ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು ಇಲಾಖೆಯ ನೌಕರ ಆ ಬಿಲ್ ವಿಚಾರ ಪ್ರಶ್ನಿಸಿದ್ದಾಗ ಅವನನ್ನು ಥಳಿಸಲಾಗಿದೆ.