ಪ.ಬ ಮೃತ ಬಿಜೆಪಿ ಕಾರ್ಯಕರ್ತರ ಸಾವು: ಕುಟುಂಬ ಸದಸ್ಯರಿಗೆ ಸ್ಥಳೀಯರ ಕೈವಾಡದ ಬಗ್ಗೆ ಶಂಕೆ 
ದೇಶ

ಪ.ಬ ಮೃತ ಬಿಜೆಪಿ ಕಾರ್ಯಕರ್ತರ ಸಾವು: ಕುಟುಂಬ ಸದಸ್ಯರಿಗೆ ಸ್ಥಳೀಯರ ಕೈವಾಡದ ಬಗ್ಗೆ ಶಂಕೆ

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗಷ್ಟೇ ಅನುಮಾನಾಸ್ಪದವಾಗಿ ಮೃತಪಟ್ಟ ಬಿಜೆಪಿ ಕಾರ್ಯಕರ್ತರ ಸಾವಿನ ಬಗ್ಗೆ ಕುಟುಂಬ ಸದಸ್ಯರು ಮಾತನಾಡಿದ್ದು, ಸ್ಥಳೀಯರ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಪುರುಲಿಯಾ: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗಷ್ಟೇ ಅನುಮಾನಾಸ್ಪದವಾಗಿ ಮೃತಪಟ್ಟ ಬಿಜೆಪಿ ಕಾರ್ಯಕರ್ತರ ಸಾವಿನ ಬಗ್ಗೆ ಕುಟುಂಬ ಸದಸ್ಯರು ಮಾತನಾಡಿದ್ದು, ಸ್ಥಳೀಯರ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ದುಲಾಲ್ ಕುಮಾರ್ (30) ಹಾಗೂ ತ್ರಿಲೋಚನ್ ಮಹಾತೋ (21) ಅವರ ಶವಗಳು ಬಮರಾಮ್ ಪುರ್ ನ ತಮ್ಮ ಗ್ರಾಮಗಳಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.  ತೃತೀಯ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ ತ್ರಿಲೋಚನ್ ಮಹಾತೋ ಬಿಜೆಪಿಗಾಗಿ ಗ್ರಾಫಿಟಿ ಮಾಡಿಕೊಡುತ್ತಿದ್ದ. ಇನ್ನು ರೇಷನ್ ಅಂಗಡಿ ನಡೆಸುತ್ತಿದ್ದ ದುಲಾಲ್ ಸಹ ಬಿಜೆಪಿಯ ಬೂತ್ ಮಟ್ಟದ ನಾಯಕನಾಗಿದ್ದ ಇಬ್ಬರೂ ಕೆಲವೇ ತಿಂಗಳ ಹಿಂದೆ ಬಿಜೆಪಿ ಸೇರಿದ್ದರು. 
ಇಬ್ಬರ ಗ್ರಾಮಗಳೂ ಸುಮಾರು 10 ಕಿ.ಮೀ ವ್ಯಾಪ್ತಿ ದೂರದಲ್ಲಿದ್ದು ತ್ರಿಲೋಚನ್ ಹಾಗೂ ದುಲಾಲ್ ಇಬ್ಬರಿಗೂ ಅನಾಮಿಕ ವ್ಯಕ್ತಿಗಳಿಂದ ಬೆದರಿಕೆ ಇತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇಬ್ಬರೂ ಬೂತ್ ಮಟ್ಟದ ನಾಯಕರಾಗಿದ್ದರಿಂದ ಅವರನ್ನು ಇತ್ತೀಚೆಗಷ್ಟೇ ನಡೆದ ಪಂಚಾಯತ್ ಚುನಾವಣೆಯಲ್ಲಿ ರಿಗ್ಗಿಂಗ್ ನಡೆಯದಂತೆ ತಡೆಯಲು ರಚಿಸಿದ ಬೂತ್ ರಕ್ಷಾ ಸಮಿತಿಯಲ್ಲಿ ಸಕ್ರಿಯರಾಗಿದ್ದರು. 
ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರಿಂದ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಆದರೆ ಇದು ಟಿಎಂಸಿ ನಾಯಕರ ಆಕ್ರೋಶಕ್ಕೆ ಗುರಿಯಾಗಿ, ಬಿಜೆಪಿ ನಾಯಕ ತ್ರಿಲೋಚನ್ ಗೆ ಬೆದರಿಕೆ ಹಾಕಿದ್ದರು ಎಂದು ಸ್ಥಳೀಯ ಬಿಜೆಪಿ ನಾಯಕ ಬಿಜೋಯ್ ಮಹಾತೋ ಹೇಳಿದ್ದಾರೆ. 
ಇನ್ನು ತನಗೆ ಅನಾಮಿಕ ವ್ಯಕ್ತಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ದುಲಾಲ್ ಸಾವಿಗೂ ಕೆಲವೇ ದಿನಗಳ ಹಿಂದೆ ಪತ್ನಿಗೆ ಹೇಳಿದ್ದರು. ಇಬ್ಬರೂ ಬೂತ್ ನಾಯಕರ ಅನುಮಾನಾಸ್ಪದ ಸಾವಿನ ಬಗ್ಗೆ ಕುಟುಂಬ ಸದಸ್ಯರು ಈಗ ಸ್ಥಳೀಯರ ಕೈವಾಡವಿದೆ ಎಂದು ಶಂಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್