ಮೃತ ಆನಂದ್, ದೀಕ್ಷಾ, ನಿಖಿಲ್ 
ದೇಶ

ಮದುವೆಯಾಗಿ 13ನೇ ದಿನಕ್ಕೆ ಪ್ರಿಯಕರನಿಂದ ಗಂಡನನ್ನೇ ಕೊಲ್ಲಿಸಿದ ಪತ್ನಿ!

ಕಳೆದ ಶನಿವಾರ ವಾಯ್ ನ ಪಸರಾನಿ ಘಾಟ್ ಬಳಿ ದರೋಡೆ ನೆಪದಲ್ಲಿ 31 ವರ್ಷದ ನವವಿವಾಹಿತನನ್ನು ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು...

ಮುಂಬೈ: ಕಳೆದ ಶನಿವಾರ ವಾಯ್ ನ ಪಸರಾನಿ ಘಾಟ್ ಬಳಿ ದರೋಡೆ ನೆಪದಲ್ಲಿ 31 ವರ್ಷದ ನವವಿವಾಹಿತನನ್ನು ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಇದೀಗ ತನಿಖೆಯಲ್ಲಿ ಆತನ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿಸಿರುವ ವಿಚಾರ ಬೆಳಕಿಗೆ ಬಂದಿದೆ. 
ಮೇ 20ರಂದು ಮೃತ ಆನಂದ್ ಕಾಂಬ್ಳೆ ದೀಕ್ಷಾ ಓವಲ್ ಎಂಬುವರನ್ನು ವಿವಾಹವಾಗಿದ್ದನು. ಹೊಸದಾಗಿ ಮದುವೆಯಾದ ದಂಪತಿಗಳು ಶನಿವಾರ ಮಹಾಬಲೇಶ್ವರಕ್ಕೆ ಬೈಕಿನಲ್ಲಿ ತೆರಳಿದ್ದರು. ಆನಂದ್ ಅವರ ಸ್ನೇಹಿತ ರಾಜೇಂದ್ರ ಬೊಬಡೆ ಮತ್ತು ಅವರ ಪತ್ನಿ ಕಲ್ಯಾಣಿ ಸಹ ಜೊತೆ ಹೋಗಿದ್ದರು. 
ಪಸರಾನಿ ಘಾಟ್ ಬಳಿ ಹೋಗುತ್ತಿದ್ದಾಗ ದೀಕ್ಷಾ ಆರೋಗ್ಯ ಸಮಸ್ಯೆಯಿಂದ ಬೈಕ್ ನಿಲ್ಲಿಸುವಂತೆ ಹೇಳಿದ್ದಾಳೆ. ನಂತರ ಇಬ್ಬರು ತಮ್ಮ ತಮ್ಮ ಬೈಕ್ ಗಳನ್ನು ಸ್ಥಳದಲ್ಲೇ ನಿಲ್ಲಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಏಕಾಏಕಿ ಆನಂದ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಆನಂದ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದರು. 
ಈ ಪ್ರಕರಣ ಸಂಬಂಧ ದೀಕ್ಷಾ ಪ್ರಿಯಕರ ನಿಖಿಲ್ ಮಾಲೇಕರ ಕೈವಾಡ ಇದೆ ಎಂದು ಶಂಕಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ದೀಕ್ಷಾ ಮತ್ತು ನಿಖಿಲ್ ಇಬ್ಬರು ಒಂದೇ ಪ್ರದೇಶದ ನಿವಾಸಿಗಳಾಗಿದ್ದು ಕೆಲವು ವರ್ಷಗಳಿಂದ ಇಬ್ಬರ ನಡುವೆ ಸಂಬಂಧ ಇತ್ತು. ಆದರೆ ಆನಂದ್ ಜೊತೆ ದೀಕ್ಷಾ ಪೋಷಕರು ಮದುವೆ ಮಾಡಿಸಿದ್ದಾರೆ. ಈ ಬಗ್ಗೆ ದೀಕ್ಷಾ ನಿಖಿಲ್ ಗೆ ಕರೆ ಮಾಡಿ ಹೇಳಿದ್ದಾಳೆ. ಬಳಿಕ ಇಬ್ಬರು ಸೇರಿ ಪ್ಲ್ಯಾನ್ ಮಾಡಿ ಆನಂದ್ ನನ್ನು ಕೊಲೆ ಮಾಡಿದ್ದಾರೆ ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ರೋಚಕ ಜಯ: ವಿಂಡೀಸ್ ವಿರುದ್ಧ ಗೆಲುವು; T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್