ಬೆಂಗಳೂರು: ಎರಡು ರಾಜ್ಯಗಳ ರೈತರ ಹಿತದೃಷ್ಟಿಯಿಂದ ತಮಿಳುನಾಡು ಜೊತೆಗಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಕಾವೇರಿ ವಿವಾದ ಇತ್ಯರ್ಥಪಡಿಸುವ ಅಗತ್ಯ ಇದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸೋಮವಾರ ಹೇಳಿದ್ದಾರೆ.
ಇಂದು ಖ್ಯಾತ ತಮಿಳು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ತಮ್ಮನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕಾವೇರಿ ವಿವಾದ ಇತ್ಯರ್ಥ ಕರ್ನಾಟಕ, ತಮಿಳುನಾಡು ರೈತರಿಗೆ ಅತ್ಯಂತ ನಿರ್ಣಾಯಕವಾಗಿದೆ ಎಂದರು.
ತಮಿಳುನಾಡು-ಕರ್ನಾಟಕ ಉತ್ತಮ ಬಾಂಧವ್ಯ ಹೊಂದಬೇಕು, ಕಾವೇರಿ ವಿವಾದ ಸೂಕ್ತ ರೀತಿಯಲ್ಲಿ ಬಗೆಹರಿಯಬೇಕು, ಎರಡೂ ರಾಜ್ಯಗಳ ನಡುವೆ ಬ್ರಾತೃತ್ವ ಭಾವ ಇರಬೇಕು ಎಂಬ ವಾದವನ್ನು ಕಮಲ್ ಹೊಂದಿದ್ದಾರೆ ಎಂದರು.
ಕಾವೇರಿ ವಿವಾದ ಬಗೆಹರಿಸಲು ತಮಿಳುನಾಡು ಸರ್ಕಾರದೊಂದಿಗೆ ಮಾತನಾಡಲು ಸಿದ್ಧವಿರುವುದಾಗಿಯೂ ಕುಮಾರಸ್ವಾಮಿ ಈ ಸಂದರ್ಭದಲ್ಲಿ ಹೇಳಿದರು.
ಇದೇ ವಳೆ ಕಮಲ್ ಹಾಸನ್ ಅವರು ಅತ್ಯುತ್ತಮ ಕಲಾವಿದ ಜೊತೆಗೆ ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡಿರುವ ರಾಜಕಾರಣಿ ಎಂದು ಹೊಗಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics