ಕೈರಾನ ಉಪಚುನಾವಣೆ: ಹೆಚ್ಚು ಬೆಳಕು ಬಿದ್ದದ್ದೇ ವಿವಿಪ್ಯಾಟ್ ಅಸಮರ್ಪಕ ಕಾರ್ಯನಿರ್ವಹಣೆಗೆ ಕಾರಣ 
ದೇಶ

ಕೈರಾನ ಉಪಚುನಾವಣೆ: ಹೆಚ್ಚು ಬೆಳಕು ಬಿದ್ದದ್ದೇ ವಿವಿಪ್ಯಾಟ್ ಅಸಮರ್ಪಕ ಕಾರ್ಯನಿರ್ವಹಣೆಗೆ ಕಾರಣ

ಕೈರಾನ ಉಪಚುನಾವಣೆಯ ವೇಳೆ ಅತಿಯಾದ ಬೆಳಕು ಬಿದ್ದದ್ದೇ ವಿವಿಪ್ಯಾಟ್ ಅಸಮರ್ಪಕ ಕಾರ್ಯನಿರ್ವಹಣೆ ಮಾಡುವುದಕ್ಕೆ ಕಾರಣವಾಗಿರಬಹುದು ಎಂದು ಚುನಾವಣಾ ಆಯೋಗ ಹೇಳಿದೆ.

ನವದೆಹಲಿ: ಕೈರಾನ ಉಪಚುನಾವಣೆಯ ವೇಳೆ ಅತಿಯಾದ ಬೆಳಕು ಬಿದ್ದದ್ದೇ ವಿವಿಪ್ಯಾಟ್ ಅಸಮರ್ಪಕ ಕಾರ್ಯನಿರ್ವಹಣೆ ಮಾಡುವುದಕ್ಕೆ ಕಾರಣವಾಗಿರಬಹುದು ಎಂದು ಚುನಾವಣಾ ಆಯೋಗ ಹೇಳಿದೆ. 
ಚುನಾವಣಾ ಆಯೋಗದ ಎರಡು ತಂಡಗಳು ನೀಡಿರುವ ವರದಿಯನ್ನು ಆಧರಿಸಿ ಆಯೋಗ ಹೇಳಿಕೆ ನೀಡಿದ್ದು, ಕಾಂಟ್ರಾಸ್ಟ್ ಸಂವೇದಕಗಳು ಹಾಗೂ ಲೆಂತ್ ಸಂವೇದಕಗಳ ವೈಫಲ್ಯ ಮೇ.28 ರಂದು ನಡೆದ ಲೋಕಸಭಾ ಉಪಚುನಾವಣೆಯಲ್ಲಿ ವಿವಿಪ್ಯಾಟ್ ಯಂತ್ರದ ಅಸಮರ್ಪಕ ಕಾರ್ಯನಿರ್ವಹಣೆಗೆ ತಾಂತ್ರಿಕ ಕಾರಣ ಎಂದು ಹೇಳಿದೆ. 
ಮತಗಟ್ಟೆಯಲ್ಲಿ ಅತಿ ಹೆಚ್ಚು ಬೆಳಕು ಬಿದ್ದರೆ ಈ ರೀತಿಯ ತಾಂತ್ರಿಕ ದೋಷಗಳು ಉಂಟಾಗುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗ ತನ್ನ ಹೇಳಿಕೆಯಲ್ಲಿ ಹೇಳಿದೆ.  ಮುಂದಿನ ದಿನಗಳಲ್ಲಿ ಈ ರೀತಿ ಹೆಚ್ಚು ಬೆಳಕು ಬಿದ್ದರೂ ಸಹ ತಾಂತ್ರಿಕ ದೋಷ ಎದುರಾಗದಂತೆ ಯಂತ್ರಗಳನ್ನು ಆಧುನೀಕರಣಗೊಳಿಸಲು ವಿವಿಪ್ಯಾಟ್ ಯಂತ್ರಗಳನ್ನು ತಯಾರಿಸುವ ಇಸಿಐಎಲ್ ಹಾಗೂ ಬಿಇಎಲ್ ಸಂಸ್ಥೆಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನರಕ ಸೃಷ್ಟಿಸುತ್ತೇವೆ: ಅಮೆರಿಕಾ ಬೆದರಿಕೆಗೆ ಕ್ಯಾರೆ ಎನ್ನದ ಇರಾನ್; ಇಸ್ರೇಲ್-ಕುವೈತ್ ಮೇಲೆ ಕ್ಷಿಪಣಿ-ಡ್ರೋನ್ ದಾಳಿ..!

“ನಮ್ಮನ್ನು ಕೆಣಕದಿರಿ”...: ಕೋಲ್ಕತಾ ಹೆಸರೆತ್ತಿ ಭಾರತಕ್ಕೆ ಪಾಕ್ ಬೆದರಿಕೆ, ಪದೇ ಪದೇ ಯುದ್ಧೋತ್ಸಾಹದ ಮಾತು..!

Uniform Civil Code: ಇದು ಸಂವಿಧಾನ ಉಲ್ಲಂಘನೆ, ಮುಸ್ಲಿಮರ ಮೇಲೆ ಹಿಂದೂ ಕಾಯ್ದೆ ಹೇರಿಕೆ ಒಪ್ಪಲ್ಲ; ಅಸಾದುದ್ದೀನ್ ಓವೈಸಿ

ಮಡಿಕೇರಿ: 3 ದಿನಗಳಾದರೂ ಪತ್ತೆಯಾಗದ ಟ್ರೆಕ್ಕಿಂಗ್ ಗೆ ತೆರಳಿದ್ದ ಕೇರಳದ ಯುವತಿ, ANF ನಿಂದ ತೀವ್ರ ಹುಡುಕಾಟ

ಕಾಂಗ್ರೆಸ್ ಗ್ಯಾರಂಟಿಗಳು ಜನರನ್ನು ರಕ್ಷಿಸಿದರೆ, ಮೋದಿ ಸರ್ಕಾರ ಜನರ ಜೇಬು ಕತ್ತರಿಸುತ್ತಿದೆ: ರಂದೀಪ್ ಸಿಂಗ್ ಸುರ್ಜೆವಾಲಾ

SCROLL FOR NEXT