ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಇಂತಹ ವಿರೋಧ ಪಕ್ಷ ಹೊಂದಿರುವುದು ಬಿಜೆಪಿಯ ಅದೃಷ್ಟ: ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅಮಿತ್ ಶಾ

ಇಂತಹ ವಿರೋಧ ಪಕ್ಷವನ್ನು ಹೊಂದಿರುವುದಕ್ಕೆ ಬಿಜೆಪಿ ಅದೃಷ್ಟ ಮಾಡಿತ್ತು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶನಿವಾರ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ...

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
Manjula VN
Updated On : 9 Jun 2018, 1:26 am
ನವದೆಹಲಿ; ಇಂತಹ ವಿರೋಧ ಪಕ್ಷವನ್ನು ಹೊಂದಿರುವುದಕ್ಕೆ ಬಿಜೆಪಿ ಅದೃಷ್ಟ ಮಾಡಿತ್ತು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶನಿವಾರ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. 
ಜೈಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿರುವ ಅವರು ಕಾಂಗ್ರೆಸ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. 
ಬಿಜೆಪಿ ಆ ಕೆಲಸ ಮಾಡಿಲ್ಲ, ಈ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್ ವಿರೋಧ ಪಕ್ಷದ ನಾಯಕರು ಟೀಕಿಸುತ್ತಿದ್ದಾರೆಯೇ ಹೊರತು ಭಾರತವನ್ನು ದಶಕಗಳ ಕಾಲ ಆಳಿದ ಅವರ ಮೂರು ತಲೆಮಾರುಗಳ ಲೆಕ್ಕವನ್ನು ಮಾತ್ರ ನೀಡುತ್ತಿಲ್ಲ ಎಂದು ಹೇಳಿದ್ದಾರೆ. 

Advertisement

Advertisement

ಅನೇಕ ರಾಜ್ಯಗಳಲ್ಲಿ ಅಧಿಕಾರವನ್ನು ಕಳೆದುಕೊಂಡು, ಕೇವಲ ಕೆಲ ಉಪ ಚುನಾವಣೆಗಳಲ್ಲಿ ಗೆಲವು ಗಳಿಸಿ ಸಂತೋಷದಲ್ಲಿರುವ ವಿರೋಧ ಪಕ್ಷಗಳನ್ನು ನೋಡುತ್ತಿದ್ದರೆ ಇಂತಹ ವಿರೋಧ ಪಕ್ಷವನ್ನು ಹೊಂದಿರುವುದು ಬಿಜೆಪಿಯ ಅದೃಷ್ಟವೆಂದು ಎನಿಸುತ್ತಿದೆ. 
ನಾವು 8 ಉಪಚುನಾವಣೆಗಳಲ್ಲಿ ಸೋಲು ಕಂಡಿರಬಹುದು. ಆದರೆ, 14 ರಾಜ್ಯಗಳಲ್ಲಿ ಕಾಂಗ್ರೆಸ್ ನಿಂದ ಅಧಿಕಾರವನ್ನು ಕಿತ್ತುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. 
ಇದೇ ವೇಳೆ ರಾಹುಲ್ ಗಾಂಧಿಯವರನ್ನು ಬಬುವಾ (ಜಿಜ್ಞಾಸೆ ಹೊಂದಿರುವ ವ್ಯಕ್ತಿ) ಎಂದು ಕರೆದಿರುವ ಅಮಿತ್ ಶಾ ಅವರು, ಅರೇ ಬಬುವಾ, ನೀವು 70 ವರ್ಷದ ಆಡಳಿತದಲ್ಲಿ ಏನು ಮಾಡಿದ್ದೀರಿ ಎಂಬುದನ್ನು ಹೇಳಿ?... ನೀವು ಸರಿಯಾಗಿ ಕೆಲಸ ಮಾಡಿದ್ದರೆ, ಇಂದು ನಮಗೆ ಶೌಚಾಲಯಗಳನ್ನು ಕಟ್ಟಿಸುವಂತಹ ಹಾಗೂ ಬಡ ತಾಯಂದಿರಿಗೆ ಸಿಲಿಂಡರ್ ಒದಗಿಸುವ ಅದೃಷ್ಟ ನಮ್ಮದಾಗುತ್ತಿರಲಿಲ್ಲ ಎಂದಿದ್ದಾರೆ. 
ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೊಂಡಾಡಿರುವ ಅವರು ವಿಶ್ವದಾದ್ಯಂತ ಜನಪ್ರಿಯ ನಾಯಕರಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮ್ಮ ದೇಶವನ್ನು ಮುನ್ನಡೆಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ಭಾರತ ಮತ್ತೊಮ್ಮೆ ವಿಶ್ವ ಗುರುವಾಗಲಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement