ನವದೆಹಲಿ: ಪ್ರಧಾನಿ ನರೇಂದ್ರಮೋದಿ ಹತ್ಯೆಗೆ ನಕ್ಸಲೀಯರು ಸಂಚು ರೂಪಿಸಿದ್ದರು ಎಂಬ ವರದಿ ಬಗ್ಗೆ ತನಿಖೆ ನಡೆಯಬೇಕು. ಈ ವಿಷಯವನ್ನು ರಾಜಕೀಯಗೊಳಿಸದೆ ಸ್ಪಷ್ಟಪಡಿಸಬೇಕೆಂದು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಪ್ರಧಾನಿ ವಿರುದ್ಧ ಬೆದರಿಕೆ ವದಂತಿಯಾಗಿದ್ದರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು, ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಕ್ಷದ ವಕ್ತಾರ ಪವನ್ ಖೇರ್ ದೆಹಲಿಯಲ್ಲಿಂದು ಸುದ್ದಿಗಾರರಿಗೆ ಹೇಳಿದರು.
ಸಮಸ್ಯೆಯನ್ನು ರಾಜಕೀಯಗೊಳಿಸಲು ಪ್ರಯತ್ನಿಸಲಾಗುತ್ತಿದೆ " ಎಂಬ ಅಂಶವನ್ನು ಉಲ್ಲೇಖಿಸಿದ ಅವರು, ಸಣ್ಣ ರಾಜಕೀಯಕ್ಕಾಗಿ ಪ್ರಧಾನಮಂತ್ರಿಗೆ ಬೆದರಿಕೆಯನ್ನು ಬಳಸಬೇಡಿ" ಎಂದು ಹೇಳಿದರು.
ನಾವು ಇಬ್ಬರು ಪ್ರಧಾನಮಂತ್ರಿಯನ್ನು ಕಳೆದುಕೊಂಡಿದ್ದೀವಿ.ಛತ್ತೀಸ್ ಗಢ ಹಿಂಸಾಚಾರದಲ್ಲಿ ಇಡೀ ನಾಯಕತ್ವವನ್ನೇ ಕಳೆದುಕೊಂಡಿದ್ದೀವಿ. ಭಯೋತ್ಪಾದನೆ, ನಕ್ಸಲೀಯರ ವಿರುದ್ಧದ ಹೋರಾಟ ನಮಗೆ ಗೊತ್ತಿಗೆ. ಆದರೆ, ರಾಜಕೀಯದೊಂದಿಗೆ ಆಟವಾಡಲಿಲ್ಲ. ಛತ್ತೀಸ್ ಗಢದಲ್ಲಿ ತಮ್ಮ ನಾಯಕನನ್ನು ಕಳೆದುಕೊಂಡಾಗ ಬಿಜೆಪಿ ಅಧಿಕಾರದಲ್ಲಿತ್ತು . ಆದರೆ ನಾವು ರಾಜಕೀಯ ಮಾಡಿದ್ದೇವಾ ಎಂದು ಪ್ರಶ್ನಿಸಿದರು.
ಪ್ರಧಾನಿ ಹತ್ಯೆ ಸಂಚಿಗೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಐವರ ಪೈಕಿ ದೆಹಲಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರ ಮನೆಯಿಂದ ಪತ್ರವೊಂದವನ್ನು ವಶಪಡಿಸಿಕೊಂಡಿರುವುದಾಗಿ ಪುಣೆ ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದಾರೆ. ಅಲ್ಲದೇ ನಿಷೇಧಿತ ಸಿಪಿಐ( ಎಂ)ನೊಂದಿಗೆ ಇವರು ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲಿಯೇ ಪ್ರಧಾನಿ ನರೇಂದ್ರಮೋದಿಯನ್ನು ಹತ್ಯೆ ಮಾಡುವ ಬಗ್ಗೆ ಆ ಪತ್ರದಲ್ಲಿ ಬರೆಯಲಾಗಿತ್ತು ಎಂದು ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದಾರೆ.