ಭಿವಾನಿ: ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸುವವರನ್ನು ಗುಂಡಿಟ್ಟು ಕೊಲ್ಲಬೇಕೆಂದು ರಾಜ್ಯಸಭಾ ಬಿಜೆಪಿ ಸಂಸದ ಡಾ.ಡಿ.ಪಿ. ವ್ಯಾಟ್ಸ್ ಅವರು ಸೋಮವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಕಲ್ಲು ತೂರಾಟಗಾರರ ವಿರುದ್ಧದ ಪ್ರಕರಣಗಳನ್ನು ಕೈ ಬಿಡಲಾಗುತ್ತಿದೆ ಎಂಬ ಸುದ್ದಿಗಳನ್ನು ಓದಿದ್ದೆ. ಆದರೆ, ಕಲ್ಲು ತೂರಾಟಗಾರರನ್ನು ಗುಂಡಿಟ್ಟು ಹತ್ಯೆ ಮಾಡಬೇಕು ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ದೆಹಲಿಯಲ್ಲಿದ್ದಾಗ ನಾನು ಕಾಶ್ಮೀರಿ ಫುಟ್ಬಾಲರ್ ಅಫ್ಶಾನ್ ಆಶಿಕಿರನ್ನು ಭೇಟಿ ಮಾಡಿದ್ದೆ. ಈ ಹಿಂದೆ ಅವರೂ ಕೂಡ ಕಲ್ಲು ತೂರಾಟದಲ್ಲಿ ಪಾಲ್ಗೊಂಡಿರುವುದಾಗಿ ಹೇಳಿಕೊಂಡಿದ್ದರು. ಕ್ರೀಡಾಲೋಕಕ್ಕೆ ಕಾಲಿಟ್ಟ ಬಳಿಕ ಅವರ ಇಡೀ ಜೀವನವೇ ಬದಲಾಯಿತು. ಕ್ರೀಡೆ ನಿಮ್ಮ ಜೀವನವನ್ನು ಬದಲಾಯಿಸುತ್ತದೆ. ಮಕ್ಕಳನ್ನು ಬಹುಬೇಗ ತಪ್ಪು ಹಾದಿಗೆಳೆಯಬಹುದು. ಆದರೆ, ನಮಗೆ ಸತ್ಯ ಗೊತ್ತಿದೆ. ಹೀಗಾಗಿಯೇ ಮಕ್ಕಳ ವಿರುದ್ಧ ಎಲ್ಲಾ ಕಲ್ಲು ತೂರಾಟ ಪ್ರಕರಗಳನ್ನು ಕೈಬಿಡುತ್ತಿದ್ದೇವೆಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics