ನವದೆಹಲಿ: ಬ್ರಿಟನ್ ಇತರೆ ದೇಶಗಳ ವಾಂಟೆಡ್ ಕ್ರಿಮಿನಲ್ ಗಳಿಗೆ ಸುರಕ್ಷಿತ ತಾಣವಾಗಬಾರದು ಎಂದು ಭಾರತ ಸೋಮವಾರ ಬ್ರಿಟನ್ ಸಚಿವರಿಗೆ ಸ್ಪಷ್ಟ ಸಂದೇಶ ನೀಡಿದೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಇಂದು ತಮ್ಮನ್ನು ಭೇಟಿ ಮಾಡಿದ ಬ್ರಿಟನ್ ಸಚಿವ ಬಾರೊನೆಸ್ ವಿಲಿಯಮ್ಸ್ ಅವರೊಂದಿಗೆ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ನೀರವ್ ಮೋದಿ ಹಾಗೂ ವಿಜಯ್ ಮಲ್ಯ ಅವರ ವಿಷಯ ಪ್ರಸ್ತಾಪಿಸಿದ್ದು, ಬ್ರಿಟನ್ ವಾಂಟೆಡ್ ಕ್ರಿಮಿನಲ್ ಗಳಿಗೆ ಸುರಕ್ಷಿತ ತಾಣವಾಗಬಾರದು ಎಂದು ಹೇಳಿರುವುದಾಗಿ ಗೃಹ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತ ಲಂಡನ್ ಕೋರ್ಟ್ ಅನ್ನು ಗೌರವಿಸುತ್ತದೆ ಮತ್ತು ಭಾರತಕ್ಕೆ ಬೇಕಾಗಿರುವ ಆರೋಪಿಗಳನ್ನು ವಾಪಸ್ ಕರೆತರಲು ಬ್ರಿಟನ್ ಕಾನೂನುಗಳನ್ನು ಅನುಸರಿಸಲಿದೆ ಎಂದು ಕಿರಣ್ ರಿಜಿಜು ಅವರು ವಿಲಿಯಮ್ಸ್ ಗೆ ತಿಳಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರು ವಂಚಿಸಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಬ್ರಿಟನ್ ನಲ್ಲಿದ್ದಾರೆ ಎಂದು ಯುಕೆ ನಿಯೋಗ ಖಚಿತಪಡಿಸಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ವಿಲಯಮ್ಸ್ ಸಹ, ನೀರವ್ ಮೋದಿ ಮತ್ತು ವಿಜಯ್ ಮಲ್ಯ ಗಡಿಪಾರು ಪ್ರಕ್ರಿಯೆಗೆ ಬ್ರಿಟನ್ ಸಂಪೂರ್ಣ ಸಹಕಾರ ನೀಡಲಿದೆ ಎಂದು ಕಿರಣ್ ರಿಜಿಜು ಅವರಿಗೆ ಅಭಯ ನೀಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics