ದೇಶ

ನಿಶಾಲ್ ಮೋದಿ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌: ಇಂಟರ್ ಪೋಲ್ ಗೆ ಸಿಬಿಐ ಮನವಿ

Lingaraj Badiger
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್‌ ಮೋದಿ ಸಹೋದರ ನಿಶಾಲ್ ಮೋದಿ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ನೀಡಬೇಕು ಎಂದು ಸಿಬಿಐ ಬುಧವಾರ ಇಂಟರ್ ಪೋಲ್‌ಗೆ ಮನವಿ ಮಾಡಿದೆ.
ಎರಡು ದಿನಗಳ ಹಿಂದಷ್ಟೆ ನೀರವ್ ಮೋದಿ ಹಾಗೂ ಅವರ ಅಂಕಲ್ ಮೆಹುಲ್ ಚೋಕ್ಸಿಗೆ ರೆಡ್ ಕಾರ್ನರ್ ನೋಟಿಸ್ ನೀಡುವಂತೆ ಸಿಬಿಐ ಇಂಟರ್ ಪೋಲ್ ಗೆ ಪತ್ರ ಬರೆದಿತ್ತು. ಈಗ ನೀರವ್ ಮೋದಿ ಸಹೋದರ ನಿಶಾಲ್ ಹಾಗೂ ಅವರ ಉದ್ಯೋಗಿ ಸುರೇಶ್ ಶಂಕರ್ ಪರಬ್ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಗೆ ಮನವಿ ಮಾಡಿದೆ.
13 ಸಾವಿರ ಕೋಟಿ ರುಪಾಯಿ ವಂಚನೆಗೆ ಸಂಬಂಧಿಸಿದಂತ ನೀರವ್ ಮೋದಿ ಹಾಗೂ ಅವರ ಅಂಕಲ್,  ಗೀತಾಂಜಲಿ ಜೆಮ್ಸ್ ನ ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐ ಎಫ್ ಐಆರ್ ದಾಖಲಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ನೀಡಿದರೂ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಈಗ ರೆಡ್ ಕಾರ್ನರ್ ನೋಟಿಸ್ ಮೊರೆ ಹೋಗಿದೆ.
SCROLL FOR NEXT