ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಬಿಜೆಪಿ ನನ್ನ ಪಕ್ಷ ಆದರೆ, ಲಾಲೂ ನನ್ನ ಕುಟುಂಬ: ಶತ್ರುಘ್ನ ಸಿನ್ಹಾ

ಬಿಜೆಪಿ ನನ್ನ ಪಕ್ಷ ಆದರೆ, ರಾಷ್ಟ್ರೀಯ ಜನತಾ ದಳ (ಆರ್'ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಾಗೂ ಅವರ ಸಂಬಂಧಿಕರು ನನ್ನ ಕುಟುಂಬವಿದ್ದಂತೆ ಎಂದು ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಅವರು ಗುರುವಾರ ಹೇಳಿದ್ದಾರೆ...

ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ
Manjula VN
Updated On : 14 Jun 2018, 1:26 am
ಪಾಟ್ನ; ಬಿಜೆಪಿ ನನ್ನ ಪಕ್ಷ ಆದರೆ, ರಾಷ್ಟ್ರೀಯ ಜನತಾ ದಳ (ಆರ್'ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಾಗೂ ಅವರ ಸಂಬಂಧಿಕರು ನನ್ನ ಕುಟುಂಬವಿದ್ದಂತೆ ಎಂದು ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಅವರು ಗುರುವಾರ ಹೇಳಿದ್ದಾರೆ. 
ನಿನ್ನೆಯಷ್ಟೇ ಆರ್'ಜೆಡಿ ಇಫ್ತಾರ್ ಕೂಟವನ್ನು ಆಯೋಜಿಸಿತ್ತು. ಇಫ್ತಾರ್ ಕೂಟದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಲಾಲೂ ಜೀ, ರಬ್ರಿ ಜೀ, ತೇಜಸ್ವಿ, ತೇಜ್, ಮಿಸಾ ಎಲ್ಲರೂ ನನ್ನ ಕುಟುಂಬದ ಸ್ನೇಹಿತರು. ಅವರ ಆಹ್ವಾನದ ಮೇರೆಗೆ ನಾನು ಇಲ್ಲಿಗೆ ಬಂದಿದ್ದೇನೆ. ಬಿಜೆಪಿ ನನ್ನ ಪಕ್ಷ ಹೌದು, ಆದರೆ, ಇದು ನನ್ನ ಕುಟುಂಬ ಎಂದು ಹೇಳಿದ್ದಾರೆ. 
ಕೆಲ ದಿನಗಳಿಂದ ಸಿನ್ಹಾ ಅವರು ಬಿಜೆಪಿ ನಾಯಕತ್ವ ಕುರಿತಂತೆ ಹಾಗೂ ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಕುರಿತು ವಿರೋಧ ಹಾಗೂ ಟೀಕೆಗಳನ್ನು ಮಾಡುತ್ತಿರುವ ಹಿನ್ನಲೆಯಲ್ಲಿ, ಸಿನ್ಹಾ ಅವರು ಆರ್'ಜೆಡಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆಂಬ ಸುದ್ದಿಗಳು ಹರಡುತ್ತಿವೆ. 

Advertisement

Advertisement

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿನ್ಹಾ ಅವರು, ಲಾಲು ಪ್ರಸಾದ್ ನನಗೆ ಆಪ್ತ ಸ್ನೇಹಿತರಾಗಿದ್ದಾರೆಂದಿದ್ದಾರೆ. ಇದೇ ವೇಳೆ ವದಂತಿಗಳನ್ನು ತಳ್ಳಿ ಹಾಕಿದ ಅವರು, ನಾನು ಬಿಜೆಪಿ ಪಕ್ಷದಲ್ಲಿಯೇ ಇದ್ದೇನೆ. ಮುಂದೆಯೂ ಇರುತ್ತೇನೆ. ಬಿಜೆಪಿಯಿಂದ ಹೊರಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement