ಸಂಗ್ರಹ ಚಿತ್ರ 
ದೇಶ

108 ಪಾಕ್ ವಲಸಿಗರಿಗೆ ಭಾರತದ ಪೌರತ್ವ ಪ್ರದಾನ

ರಾಜಸ್ತಾನದಲ್ಲಿರುವ 108 ಪಾಕಿಸ್ತಾನ ಮೂಲದ ಹಿಂದುಗಳಿಗೆ ಭಾರತದ ಪೌರತ್ವವನ್ನು ನೀಡಲಾಗಿದೆ...

ಜೋದ್ಪುರ: ರಾಜಸ್ತಾನದಲ್ಲಿರುವ 108 ಪಾಕಿಸ್ತಾನ ಮೂಲದ ಹಿಂದುಗಳಿಗೆ ಭಾರತದ ಪೌರತ್ವವನ್ನು ನೀಡಲಾಗಿದೆ. 
ಜೋದ್ಪುರದ ಜಿಲ್ಲಾಧಿಕಾರಿ ರವಿಕುಮಾರ್ ಸುರ್ಪುರ್ ಅವರು ಪಾಕಿಸ್ತಾನದ ವಲಸಿಗರಿಗೆ ಭಾರತದ ನಾಗರೀಕತ್ವದ ಪ್ರಮಾಣಪತ್ರಗಳನ್ನು ಹಸ್ತಾಂತರ ಮಾಡಿದ್ದಾರೆ. 
ಭಾರತದ ಪೌರತ್ವ ಪ್ರಮಾಣಪತ್ರವನ್ನು ಸ್ವೀಕರಿಸಿದ ಪಾಕಿಸ್ತಾನದ ವಲಸಿಗರು, ಈ ವೇಳೆ 'ಭಾರತ್ ಮಾತಾ ಕೀ ಜೈ' ಎಂದು ಘೋಷಣಾ ವಾಕ್ಯಗಳನ್ನು ಕೂಗಿದರು. ಪ್ರಮಾಣಪತ್ರ ಸ್ವೀಕರಿಸುವ ವೇಳೆ ಬಹುತೇಕರ ಕಣ್ಣಾಲಿಗಳು ಒದ್ದೆಯಾದವು. 
ಸೀಮಂತ್ ಲೋಕ ಸಂಘಟನೆ ಅಧ್ಯಕ್ಷ ಹಿಂದು ಸಿಂಗ್ ಸೋದಾ ಅವರು ಈ ವಲಸಿಗರಿಗೆ ಭಾರತದ ನಾಗರೀಕತ್ವದ ಪ್ರಮಾಣಪತ್ರ ನೀಡುವಂತೆ ಸಾಕಷ್ಟು ಹೋರಾಟ ಮಾಡಿದ್ದರು.
ಪ್ರಸ್ತುತ 108 ಪಾಕಿಸ್ತಾನದ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದ್ದು. ಇನ್ನು 6 ಸಾವಿರ ಪಾಕಿಸ್ತಾನ ವಲಸಿಗರು ಭಾರತದ ಪೌರತ್ವಕ್ಕಾಗಿ ಕಾದು ಕುಳಿತಿದ್ದಾರೆಂದು ಹಿಂದು ಸಿಂಗ್ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ