ಯುದ್ಧನೌಕೆಗಳಲ್ಲಿ ಯೋಗ 
ದೇಶ

ಯೋಗ ದಿನ: ಸಮುದ್ರದ ಮಧ್ಯೆಯೇ ಯುದ್ಧ ನೌಕೆಯಲ್ಲಿ ಯೋಗ ಮಾಡಿದ ನೌಕಾಪಡೆ!

4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ವಿಶ್ವಾದ್ಯಂತ ಕೋಟ್ಯಂತರ ಮಂದಿ ಯೋಗಾಭ್ಯಾಸ ಮಾಡುತ್ತಿದ್ದು, ಕೇರಳದಲ್ಲಿ ಭಾರತೀಯ ನೌಕಾಪಡೆಯ ಸೈನಿಕರು ಯುದ್ಧನೌಕೆಯಲ್ಲೇ ಯೋಗ ಮಾಡುವ ಮೂಲಕ ಗಮನ ಸೆಳೆದರು.

ಕೊಚ್ಚಿ: 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ವಿಶ್ವಾದ್ಯಂತ ಕೋಟ್ಯಂತರ ಮಂದಿ ಯೋಗಾಭ್ಯಾಸ ಮಾಡುತ್ತಿದ್ದು, ಕೇರಳದಲ್ಲಿ ಭಾರತೀಯ ನೌಕಾಪಡೆಯ ಸೈನಿಕರು ಯುದ್ಧನೌಕೆಯಲ್ಲೇ ಯೋಗ ಮಾಡುವ ಮೂಲಕ ಗಮನ ಸೆಳೆದರು.
ಸುಮಾರು 40 ಮಂದಿ ಸೈನಿಕರ ಕೇರಳದ ಕೊಚ್ಚಿ ಸೇನಾಪಡೆಯ ಬಂದಿರನಲ್ಲಿ ಯೋಧ ನಡೆಸಿದರು. ಕೊಚ್ಚಿಯಲ್ಲಿ ಲಂಗರು ಹಾಕಿರುವ ಐಎನ್ ಎಸ್ ಜಮುನಾ ನೌಕೆಯಲ್ಲಿ ಯೋಧರು ಹಲವು ಯೋಗಾಸನಗಳನ್ನು ಪ್ರದರ್ಶನ ಮಾಡಿದರು. ಯೋಧರ ಈ ಯೋಗ ಪ್ರದರ್ಶನವನ್ನು ನೋಡಲು ನೂರಾರು ಮಂದಿ ಆಗಮಿಸಿದ್ದರು. 
ಇನ್ನು ಐಎನ್ ಎಸ್ ವಿರಾಟ್ ನಲ್ಲಿ ಸಾವಿರ ಯೋಧರು ಮತ್ತು ಐಎನ್ಎಸ್ ಜ್ಯೋತಿ ನೌಕೆಗಳಲ್ಲಿಯೂ ಯೋಧರು ಯೋಗ ಅಭ್ಯಾಸ ಮಾಡಿದರು. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಐಎನ್ಎಸ್ ಜ್ಯೋತಿ ನೌಕೆಯಲ್ಲಿ ವೈಸ್ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ಫ್ಲಾಗ್ ಆಫೀಸರ್ ಗಳ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ ನಡೆಯಿತು. ಅಂತೆಯೇ ವಿಶಾಖಪಟ್ಟಣದಲ್ಲಿರುವ ಜಲಾಂತರ್ಗಾಮಿಯೊಳಗೇ ನಾವಿಕರು ಯೋಗ ಮಾಡಿದ್ದು ವಿಶೇಷವಾಗಿತ್ತು.
ಇನ್ನು ದೇಶದ ಪ್ರಬಲಣ ಯುದ್ಧನೌಕೆ ಐಎನ್ ಎಸ್ ವಿರಾಚ್ ನಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ಸೈನಿಕರು ಒಟ್ಟಾಗಿ ಯೋಗ ಮಾಡುವ ಮೂಲಕ ಯೋಗದ ಮಹತ್ವವನ್ನು ವಿಶ್ವಕ್ಕೆ ಸಾರಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!