ಅಮರನಾಥ ಯಾತ್ರೆ; ಉಧಂಪುರ ರೈಲ್ವೇ ನಿಲ್ದಾಣದಲ್ಲಿ ಹೆಚ್ಚಿದ ಭದ್ರತೆ
ಉಧಂಪುರ; ಅಮರನಾಥ ಯಾತ್ರೆ ಆರಂಭಗೊಂಡಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಿರುವ ಅಧಿಕಾರಿಗಳು ಉಧಂಪುರ ರೈಲ್ವೇ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಭದ್ರತಾ ಕ್ರಮಗಳ ಕುರಿತೆತ ಪ್ರತಿಕ್ರಿಯೆ ನೀಡಿರುವ ಅಧಿಕಾರಿ ರಂಜಿತ್ ಸಿಂಗ್ ಸಂಬ್ಯಾಲ್ ಅವರು, ಅಮರನಾಥ ಯಾತ್ರೆ ಯಾತ್ರಿಕರು ರೈಲ್ವೇ ಮಾರ್ಗದಿಂದ ಪ್ರಯಾಣ ಬೆಳೆಸುತ್ತಿದ್ದು, ಈ ಹಿನ್ನಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.
ಅಮರನಾಥ ಯಾತ್ರಿಕರು ರೈಲ್ವೇ ಮಾರ್ಗವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಮುಖವಾಗಿ ಉಧಂಪುರ ರೈಲ್ವೇ ನಿಲ್ದಾಣದ ಮೂಲಕ ಪ್ರಯಾಣ ಬೆಳೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರೈಲ್ವೇ ನಿಲ್ದಾಣದ ಮುಖ್ಯ ದ್ವಾರದಲ್ಲಿ ಹಲವು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಕ್ಸ್-ರೇ ಮಷಿನ್, ಬ್ಯಾಗ್ ಸ್ಕ್ಯಾನರ್, ಭದ್ರತಾ ನಾಯಿಗಳಿಂದ ಪರಿಶೀಲನೆಗಳನ್ನು ನಡೆಸಲಾಗುತ್ತಿದೆ. ರೈಲ್ವೇ ರಕ್ಷಣಾ ಪಡೆಗಳು ಕೂಡ ನಮ್ಮೊಂದಿಗೆ ಕೈಜೋಡಿಸಿವೆ ಎಂದು ತಿಳಿಸಿದ್ದಾರೆ.
ಯಾತ್ರಿಕರ ಸಹಾಯಕ್ಕಾಗಿ ಪೊಲೀಸರು 24*7 ಸಹಾಯವಾಣಿಯನ್ನು ಆರಂಭಿಸಿವೆ. ಯಾತ್ರಿಕರು ಎಲ್ಲಿಯೇ ಇದ್ದರೂ, ಯಾವುದೇ ಸಮಯದಲ್ಲಿಯೇ ಆದರೂ ಅವರಿಗೆ ಸಹಾಯ ಮಾಡಲು ಸಿಬ್ಬಂದಿಗಳು ಸಿದ್ಧರಿದ್ದಾರೆಂದಿದ್ದಾರೆ.