ಮೋದಿಗಾಗಿ ಮಡಕೆಗಳಲ್ಲಿ ಗುಲಾಲ್ ತಂದ ವಿಧವೆಯರು
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗಾಗಿ ವೃಂದಾವನದ ಐವರು ವಿಧವೆಯರು,11 ಮಡಕೆಗಳಲ್ಲಿ ನೈಸರ್ಗಿಕ ಹೋಳಿ ಬಣ್ಣ ಮತ್ತು ಅವರು ಇಷ್ಟ ಪಡುವ ಸಿಹಿಯನ್ನು ತೆಗೆದುಕೊಂಡು ನವದೆಹಲಿಗೆ ತೆರಳಿದ್ದಾರೆ.
ಒಂದು ವಾರದ ಮೊದಲು ಉತ್ತರಪ್ರದೇಶದ ವೃಂದಾವನದ ಐತಿಹಾಸಿಕ ಗೋಪಿನಾಥ ದೇವಾಲಯದಲ್ಲಿ ಬಗೆ ಬಗೆಯ ಬಣ್ಣಗಳು ಮತ್ತು ಹೂವುಗಳೊಂದಿಗೆ ವಿಧವೆಯರು ಹೋಳಿಹಬ್ಬವನ್ನು ಆಚರಿಸಿ ಸಂಭ್ರಮ ವ್ಯಕ್ತಪಡಿಸಿದರು.
ತಮ್ಮ ಸಂಪ್ರದಾಯವನ್ನು ಮುರಿದು ಆರನೇ ವರ್ಷ ವೃಂದಾವನದ ವಿಧವೆಯರು ಹೋಳಿ ಆಚರಿಸುತ್ತಿದ್ದಾರೆ.
ಬಿಳಿ ಬಣ್ಣದ ಸೀರೆ ಧರಿಸಿದ ನೂರಾರು ಮಹಿಳೆಯರು, ಆಶ್ರಮದಲ್ಲಿ ಬಣ್ಣ ಹಚ್ಚಿ ಹೋಳಿಯಾಡಿದರು, ಸುಮಾರು 1,600 ಕೆಜಿ ಹೋಳಿ ಪೌಡರ್ ಮತ್ತು 1,600 ಕೆಜಿ ಗುಲಾಲ್ ಬಳಸಿ, ಹಾಡು ಹಾಡುತ್ತಾ ಭಜನೆ ಮಾಡಿಕೊಂಡು ಹೋಳಿ ಆಡಿದರು. ವಿಧವೆ ಸಹೋದರಿಯರು ಪ್ರಧಾನಿ ಮೋದಿಗಾಗಿ ನೈಸರ್ಗಿಕ ಮೂಲಿಕೆಗಳಿಂದ ತಯಾರಿಸಿದ ಗುಲಾಲ್ ಅನ್ನು ಮೋದಿಗಾಗಿ ತೆಗೆದುಕೊಂಡು ಹೋಗುತ್ತಿರುವುದಾಗಿ 81 ವರ್ಷದ ಮನು ಘೋಷ್ ಹೇಳಿದ್ದಾರೆ,
ಸಾವಿರಾರು ವಿಧವೆ ಸಹೋದರಿಯರ ಮೆಚ್ಚಿನ ಸಹೋದರರಾಗಿರುವ ಮೋದಿ ಅವರಿಗೆ ಕಳೆದ ಕೆಲವು ವರ್ಷಗಳಿಂದ ರಾಕಿ ಕಟ್ಟಲಾಗುತ್ತಿದೆ.
ಭಾರತದಲ್ಲಿ ವಿಧವೆಯರಿಗೆ ಹೋಳಿ ಆಡಲು ಅವಕಾಶ ನೀಡುತ್ತಿರಲಿಲ್ಲ, 2012 ರಲ್ಲಿ ಮೊದಲ ಬಾರಿಗೆ ಈ ಆಚರಣೆ ಆರಂಭವಾಯಿತು, ಅಂದಿನಿಂದ ಇಂದಿನವರೆಗೂ ಹೋಳಿ ಆಚರಣೆ ಮಾಡಲಾಗುತ್ತಿದೆ.