ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಲೆನಿನ್, ಪೆರಿಯಾರ್ ಪ್ರತಿಮೆಗಳ ಬಳಿಕ ಇದೀಗ ಗಾಂಧಿ, ಅಂಬೇಡ್ಕರ್ ಪುತ್ಥಳಿಗಳ ಮೇಲೂ ದಾಳಿ

ಲೆನಿನ್ ಪ್ರತಿಮೆ ಧ್ವಂಸಗೊಳಿಸಿದ ಬಳಿಕ ದೇಶದ ವಿವಿಧೆಡೆ ಪುತ್ಥಳಿಗಳ ಮೇಲಿನ ದಾಳಿ ಮುಂದುವರೆದಿದ್ದು, ಇದೀಗ ಈ ಪಟ್ಟಿಗೆ ಗಾಂಧಿ ಮತ್ತು ಅಂಬೇಡ್ಕರ್ ಪುತ್ಥಳಿಗಳೂ ಕೂಡ ಸೇರಿವೆ.

ಹಾನಿಗೀಡಾದ ಅಂಬೇಡ್ಕರ್, ಗಾಂಧಿ ಪ್ರತಿಮೆಗಳು
Srinivasa Murthy VN
Updated On : 8 Mar 2018, 2:11 am
ನವದೆಹಲಿ: ತ್ರಿಪುರಾದಲ್ಲಿ ಲೆನಿನ್ ಪ್ರತಿಮೆ ಧ್ವಂಸಗೊಳಿಸಿದ ಬಳಿಕ ದೇಶದ ವಿವಿಧೆಡೆ ಪುತ್ಥಳಿಗಳ ಮೇಲಿನ ದಾಳಿ ಮುಂದುವರೆದಿದ್ದು, ಇದೀಗ ಈ ಪಟ್ಟಿಗೆ ಗಾಂಧಿ ಮತ್ತು ಅಂಬೇಡ್ಕರ್ ಪುತ್ಥಳಿಗಳೂ ಕೂಡ ಸೇರಿವೆ.
ತ್ರಿಪುರಾ ದಾಳಿ ಬೆನ್ನಲ್ಲೇ ತಮಿಳುನಾಡಿನಲ್ಲಿ ಪೆರಿಯಾರ್ ಪುತ್ಖಳಿ ಮೇಲೆ ದಾಳಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಕೋಲ್ಕತಾದಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುತ್ಥಳಿಗೆ ಕಪ್ಪು ಬಣ್ಣ ಎರಚಲಾಗಿತ್ತು. ಇದೀಗ ಈ ಪಟ್ಟಿಗೆ ಸಂವಿಧಾನ ಶಿಲ್ಪಿ ಬಿಆರ್ ಅಂಬೇಡ್ಕರ್, ಹಾಗೂ ರಾಷ್ಟ್ರಪಿತ ಮಹಾತ್ಮಾಗಾಂಧಿ ಪ್ರತಿಮೆಗಳು ಸೇರ್ಪಡೆಯಾಗಿವೆ.
ತಮಿಳುನಾಡಿನ ಎರಡು ಪ್ರತ್ಯೇಕ ಪ್ರದೇಶಗಳಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ವಿರೂಪಗೊಳಿಸಲಾಗಿದ್ದು, ಮಂಗಳವಾರ ತಡರಾತ್ರಿ ಉತ್ತರ ಪ್ರದೇಶದ ಮೀರತ್ ನಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಹಾನಿಗೊಳಿಸಲಾಗಿದ್ದು, ಅಂತಹುದೇ ಘಟನೆ ಇದೀಗ ತಮಿಳುನಾಡಿನ ರಾಜಧಾನಿ ಚೆನ್ನೈನ ತಿರುವೊತ್ತಿಯೂರ್ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಅಂಬೇಡ್ಕರ್ ಪ್ರತಿಮೆ ದುಷ್ಕರ್ಮಿಗಳು ಪೇಯಿಂಟ್ ಸುರಿದು ವಿರೂಪಗೊಳಿಸಿದ್ದಾರೆ.

Advertisement

Advertisement

ದುಷ್ಕರ್ಮಿಗಳ ದಾಳಿಗೆ ತುತ್ತಾದ ಮಹಾತ್ಮಾಗಾಂಧಿ ಪ್ರತಿಮೆ
ಇನ್ನು ದುಷ್ಕರ್ಮಿಗಳ ದಾಳಿಗೆ ರಾಷ್ಟ್ರಪಿತ ಮಹಾತ್ಮಾಗಾಂಧಿ ಪ್ರತಿಮೆ ಕೂಡ ತುತ್ತಾಗಿದ್ದು, ಕೇರಳ ಕಣ್ಣೂರಿನಲ್ಲಿ ಮಹಾತ್ಮಾಗಾಂಧಿ ಪ್ರತಿಮೆಯನ್ನೂ ವಿರೂಪಗೊಳಿಸಲಾಗಿದೆ. ಇಲ್ಲಿನ ತಾಲಿಪರಂಬಾ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಗಾಂಧಿ ಪುತ್ಥಳಿ ಮೇಲೆ ದಾಳಿ ಮಾಡಲಾಗಿದ್ದು, ಪ್ರತಿಮೆ ಭಗ್ನಗೊಂಡಿದೆ. ಗಾಂಧಿ ಎಡಭಾಗದ ಕೆನ್ನೆಗೆ ಹಾನಿಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments