ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಸಿಂಗಾಪುರ: ಪಕ್ಷ ಇದೀಗ ಶುದ್ಧವಾದ ಹಲಗೆಯಂತಿದ್ದು, ಭಾರತೀಯರು ಹೊಂದಿರುವ ಮೌಲ್ಯಗಳನ್ನು ರೂಪಿಸುವ ಹೊಸ ಕಾಂಗ್ರೆಸ್ ಪಕ್ಷವನ್ನು ಸ್ಥಾಪನೆ ಮಾಡುತ್ತೇನೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ಹೇಳಿದ್ದಾರೆ.
ಸಿಂಗಾಪುರದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿರುವ ಅವರು, 2012ನೇ ಸಾಲಿನಲ್ಲಿ ನಾವು ಸಾಕಷ್ಟು ಏಳುಬೀಳುಗಳನ್ನು ನೋಡಿದ್ದೇವೆ. 2012 ಮತ್ತು 2014ರಲ್ಲಿ ವ್ಯವಸ್ಥೆ ಅಸ್ಥಿರಗೊಂಡಿತ್ತು. ಎಲ್ಲಾ ರೀತಿಯ ಸಂಕಷ್ಟಗಳನ್ನು ಎದುರಿಸಿದ್ದೇವೆ. ಇದೀಗ ನಾವು ಶುದ್ಧವಾದ ಹಾಳೆಯಂತಿದ್ದು, ಹೊಸ ಅವಕಾಶ ದೊರಕಿದಂತಾಗಿದೆ ಎಂದು ಹೇಳಿದ್ದಾರೆ.
ಭಾರತೀಯರು ಹೊಂದಿರುವ ಮೌಲ್ಯಗಳನ್ನು ರೂಪಿಸುವ ಹೊಸ ಕಾಂಗ್ರೆಸ್ ಪಕ್ಷವನ್ನು ಸ್ಥಾಪನೆ ಮಾಡುತ್ತೇನೆ. ಸಮಾಜವನ್ನು ನಾವು ಸಮತೋಲನದಲ್ಲಿಟ್ಟುಕೊಳ್ಳಬೇಕಾದ ವ್ಯವಸ್ಥೆಯಂತೆ ನೋಡುತ್ತೇವೆ. ಸಮಾಜದ ಶಾಂತಿಯನ್ನು ಬಿಜೆಪಿ ನಿರ್ಲಕ್ಷಿಸುತ್ತಿದೆ. ಸಮಾಜವನ್ನು ಧ್ರುವೀಕರಣಗೊಳಿಸುವ ಮತ್ತು ಅದರಿಂದ ಉಂಟಾಗುವ ಗಂಭೀರ ಅಪಾಯಗಳನ್ನೂ ನಾವೂ ನೋಡುತ್ತಿದ್ದೇವೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics