ಮಹಾರಾಷ್ಟ್ರ: ಕರಾವಳಿ ರಕ್ಷಣಾ ಪಡೆ ಹೆಲಿಕಾಪ್ಟರ್ ಪತನ, ಮಹಿಳಾ ಪೈಲಟ್ ಗೆ ಗಾಯ
ಮುಂಬೈ: ಭಾರತೀಯ ಕರಾವಳಿ ರಕ್ಷಣಾ ಪಡೆಯ ಹೆಲಿಕಾಪ್ಟರ್ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಪತನಗೊಂಡಿದೆ. ಶನಿವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು ಹೆಲಿಕಾಪ್ಟರ್ ಪತನದ ಪರಿಣಾಮ ಮಹಿಳಾ ಪೈಲಟ್ ಗಾಯಗೊಂಡಿದ್ದಾರೆ.
ಪತನಗೊಂಡ ಹೆಲಿಕಾಪ್ಟರ್ ನಲ್ಲಿದ್ದ ನಾಲ್ವರು ಸಿಬ್ಬಂದಿಗಳನ್ನು ನೌಕಾಪಡೆ ಅಧಿಕಾರಿಗಳು ರಕ್ಷಿಸಿದ್ದು ಗಾಯಾಳುಗಳನ್ನು ಮುಂಬೈನ ನೌಕಾದಳದ ಆಸ್ಪತ್ರೆ ’ಅಶ್ವಿನಿ’ಗೆ ದಾಖಲಿಸಲಾಗಿದೆ.
"ಭಾರತೀಯ ಕರಾವಳಿ ರಕ್ಷಣ ಪಡೆಗೆ ಸೇರಿದ್ದ ಚೇತಕ್ ಹೆಲಿಕಾಪ್ಟರ್ ದೈನಂದಿನ ಗಸ್ತು ತಿರುಗುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿದೆ. ಹಾಗೆ ದೋಷ ಕಂಡುಬಂದ ತಕ್ಷಣ ಹೆಲಿಕಾಪ್ಟರ್ ನ್ನು ಲ್ಯಾಂಡ್ ಮಾಡಲು ಪ್ರಯತ್ನಿಸಿದ್ದಾರೆ. ಆಗ ಕಾಪ್ಟರ್ ಪತನಗೊಂಡಿದೆ.. ಅಲಿಭಾಗ್ ಸಮೀಪದಲ್ಲಿ ಹೆಲಿಕಾಪ್ಟರ್ ಪತನಗೊಂಡಿತು" ಪಶ್ಚಿಮ ನೌಕಾದಳದ ಕಮಾಂಡರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
:ಘಟನೆಯಲ್ಲಿ ಓರ್ವ ಮಹಿಲಾ ಪೈಲಟ್ ಗಾಯಗೊಂಡಿದ್ದು ಅವರಿಗೆ ಮುಂಬೈನಲ್ಲಿನ ನೌಕಾದಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ನೌಕಾದಳದ ಎರಡು ಚೇತಕ್ ಹೆಲಿಕಾಪ್ಟರ್ ಮತ್ತು ಒಂದು ಸೀ ಕಿಂಗ್ ’ಸಿ’ ಚಾಪರ್ ನ್ನು ಕಳಿಸಲಾಗಿದ್ದು ತುರ್ತು ಕಾರ್ಯಾಚರಣೆ ನಡೆಯುತ್ತಿದೆ" ಅಧಿಕಾರಿಗಳು ಹೇಳಿದರು.