ದೇಶ

ಶಸ್ತ್ರಾಸ್ತ್ರ ಆಮದು: ವಿಶ್ವದಲ್ಲಿಯೇ ಭಾರತ ನಂ.1 ರಾಷ್ಟ್ರ- ಎಸ್ಐಪಿಆರ್'ಐ ವರದಿ

Manjula VN
ನವದೆಹಲಿ: ಭಾರತ 2013-17ರ ಅವಧಿಯಲ್ಲಿ ವಿಶ್ವದಲ್ಲಿಯೇ ಅತೀದೊಡ್ಡ ಶಸ್ತ್ರಾಸ್ತ್ರ ಆಮದುದಾರ ರಾಷ್ಟ್ರ ಎಂದು ಗುರ್ತಿಸಲ್ಪಟ್ಟಿದೆ. 
2013-17ರ ಅವಧಿಯಲ್ಲಿ ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತದ ಪಾರು ಶೇ.12ರಷ್ಟಿತ್ತು. 2008-12ರ ಅವಧಿಗೆ ಹೋಲಿಕೆ ಮಾಡಿದರೆ, 2013-17ರ ಅವಧಿಯಲ್ಲಿ ಭಾರತದ ಶಸ್ತ್ರಾಸ್ತ್ರ ಆಮದು ಪ್ರಮಾಣ ಶೇ.24ರಷ್ಟು ಏರಿಕೆಯಾಗಿದೆ ಎಂದು ಎಸ್ಐಪಿಆರ್'ಐ (ಸ್ಟಾಕ್ ಹೋಮ್ ಅಂತರಾಷ್ಟ್ರೀ ಶಾಂತಿ ಸಂಶೋಧನಾ ಸಂಸ್ಥೆ) ವರದಿ ಹೇಳಿದೆ. 
ಇದೇ ಅವಧಿಯಲ್ಲಿ ಪಾಕಿಸ್ತಾನದ ಆಮದು ಪ್ರಮಾಣ ಶೇ.36ರಷ್ಟು ಕುಸಿತ ಕುಂಡಿದೆ. ಭಾರತದ ಒಟ್ಟು ಶಸ್ತ್ರಾಸ್ತ್ರ ಆಮದಿನ ಪೈಕಿ ಶೇ.62ರಷ್ಟು ಪಾಲನ್ನು ರಷ್ಯಾ ಹೊಂದಿದೆ ನಂತರದ ಸ್ಥಾನದಲ್ಲಿ ಅಮೆರಿಕ (ಶೇ.15) ಇಸ್ರೇಲ್ (ಶೇ.11) ದೇಶಗಳಿವೆ. 
ಇದೇ ವೇಳೆ ಅಮೆರಿಕ, ರಷ್ಯಾ, ಫ್ರಾನ್ಸ್, ಜರ್ಮನಿ ಮತ್ತು ಚೀನಾ ವಿಶ್ವದ ಟಾಪ್ 5 ಶಸ್ತ್ರಾಸ್ತ್ರ ರಫ್ತುದಾರ ದೇಶಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಈ ಐದು ದೇಶಗಳು ಜಾಗತಿಕ ಶಸ್ತ್ರಾಸ್ತ್ರ ಪೂರೈಕೆಯಲ್ಲಿ ಶೇ.74 ರಷ್ಟು ಪಾಲು ಹೊಂದಿವೆ ಎಂದು ತಿಳಿದುಬಂದಿದೆ. 
SCROLL FOR NEXT